ಬಿಗ್ ಬಾಸ್ ಸೀಸನ್ ೯ಕ್ಕೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದ ನಟಿ ದೀಪಿಕಾ ದಾಸ್, ಸದ್ಯ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಎಲಿಮಿನೇಟ್ ಆಗಿ ರೀ ಎಂಟ್ರಿ ಪಡೆದ ಅವರು ಸತತ ಎರಡು ಬಾರಿ ಕಿಚ್ಚನ ಚಪ್ಪಾಳೆ ಪಡೆದಿದ್ದಾರೆ.
sowmya malnad
ಫೋಟೋ ಕ್ರೆಡಿಟ್: ಕಲರ್ಸ್ ಕನ್ನಡ
ನಟಿ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 9ರ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.
ದೀಪಿಕಾ 11 ಹಾಗೂ 12ನೇ ವಾರ ಸತತವಾಗಿ ಕಿಚ್ಚ ಸುದೀಪ್ ಅವರಿಂದ ಮೆಚ್ಚುಗೆಯ ಚಪ್ಪಾಳೆ ಪಡೆದುಕೊಂಡಿದ್ದಾರೆ.
11ನೇ ವಾರ ದೀಪಿಕಾ ಹಾಗೂ ಅರುಣ್ ಸಾಗರ್ ಎರಡು ಸ್ಕಿಟ್ ಗಳನ್ನೂ ಮಾಡಿದ್ದರು. ಎರಡು ಚೆನ್ನಾಗಿತ್ತು ಎಂದು ಸುದೀಪ್ ಮೆಚ್ಚುಗೆ ಸೂಚಿಸಿದ್ದರು.
ಕಿಚ್ಚನ ಚಪ್ಪಾಳೆ ಬಳಿಕ ದೀಪಿಕಾ, ನಾನು ಅರುಣ್ ಅವರಿಗೆ ಧನ್ಯವಾದ ಹೇಳಬೇಕು. ನಾನು ಆಕ್ಟಿವ್ ಆಗಿರುವುದಕ್ಕೆ ಕಾರಣ ಅವರೇ ಎಂದಿದ್ದಾರೆ.
ಪ್ರವೀಣರಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ದೀಪಿಕಾ, ಎಲಿಮಿನೇಟ್ ಆಗಿ ಮತ್ತೆ ರೀ ಎಂಟ್ರಿ ಪಡೆದಿದ್ದರು.
ರೀ ಎಂಟ್ರಿ ಬಳಿಕ ಬಿಗ್ ಬಾಸ್ ಮನೆಯಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ.
ಇನ್ನು ಎರಡು ವಾರಗಳಲ್ಲಿ ಬಿಗ್ ಬಾಸ್ ಸೀಸನ್ 9 ಮುಕ್ತಾಯವಾಗಲಿದ್ದು, ಎರಡು ಗೆಲ್ಲಲಿದ್ದಾರೆ ಕಾದು ನೋಡಬೇಕಿದೆ.