Tap to Read ➤

777 ಚಾರ್ಲಿ ಟ್ರೇಲರ್ ಮೂಲಕ ಹೃದಯಸ್ಪರ್ಶಿಸಿದ ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ 777 ಚಾರ್ಲಿ ಚಿತ್ರದ ಟ್ರೇಲರ್ ಮೂಲಕ ಮನುಷ್ಯ ಮತ್ತು ನಾಯಿ ನಡುವಿನ ಬಾಂಧವ್ಯವನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದಾರೆ.
ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಟ್ರೇಲರ್ ಪರಂವಃ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಕೂಡ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ದಕ್ಷಿಣ ಚಿತ್ರರಂಗದ ಅನೇಕ ಸಿನಿತಾರೆಯರು ಚಿತ್ರದ ಟ್ರೇಲರ್ ನ್ನು ಸೋಷಿಯಲ್ ಮೀಡಿಯಾಗಳಲ್ಲಿ ಲಾಂಚ್ ಮಾಡಿ ಶುಭ ಕೋರಿದ್ದಾರೆ.
ತಮಿಳಿನಲ್ಲಿ ಧನು‍ಷ್, ಕಾರ್ತಿಕ್ ಸುಬ್ಬರಾಜು ಬಿಡುಗಡೆ ಮಾಡಿದ್ದಾರೆ.
ತೆಲುಗುನಲ್ಲಿ ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ, ಲಕ್ಷ್ಮಿ ಮಂಚು, ರೆಜಿನಾ ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದಾರೆ.
ಮಲಯಾಳಂನಲ್ಲಿ ನಿವಿನ್ ಪೌಲಿ ಸೇರಿದಂತೆ ಐವರು ಪ್ರಮುಖ ಸ್ಟಾರ್ ಗಳು ಮಲಯಾಳಂನಲ್ಲಿ ಬಿಡುಗಡೆ ಮಾಡಿದ್ದಾರೆ.
ಹಿಂದಿ ಟ್ರೇಲರ್ ನ್ನು ಹಲವು ಸಿನಿ ವಿಮರ್ಶಕರೊಂದಿಗೆ ಮುಖ್ಯ ವಿತರಕರಾದ UFO' ಸಂಸ್ಥೆ ಬಿಡುಗಡೆ ಮಾಡಿದೆ.
ಚಿತ್ರದಲ್ಲಿ ರಕ್ಷಿತ್, ಧರ್ಮ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಒಂದು ನಾಯಿಯ ಆಗಮನದಿಂದ ಹೇಗೆ ಅವನ ಬದುಕು ಪರಿವರ್ತನೆ ಆಗುತ್ತದೆ ಎಂಬುದನ್ನು ತೋರಿಸುತ್ತದೆ