Tap to Read ➤

ಬಿಗ್ ಬಾಸ್ ಮನೆಯಿಂದ ದಿವ್ಯ ಉರುಡುಗ ಎಲಿಮಿನೇಟ್

ಬಿಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮ ಈ ವಾರ ಮುಕ್ತಾಯವಾಗಲಿದ್ದು, ವಾರದ ಮಧ್ಯದಲ್ಲಿ ನಡೆಯುವ ಎಲಿಮಿನೇಷನ್ ನಲ್ಲಿ ದಿವ್ಯ ಉರುಡುಗ ದೊಡ್ಮನೆಯಿಂದ ಹೊರಬಂದಿದ್ದಾರೆ.
sowmya malnad
ಫೋಟೋ ಕೃಪೆ: ಕಲರ್ಸ್ ಕನ್ನಡ
ಬಿಗ್ ಬಾಸ್ ಕನ್ನಡ ಸೀಸನ್ 9 ಗ್ರ್ಯಾಂಡ್ ಫಿನಾಲೆಗೆ ಮೂರು ದಿನಗಳಷ್ಟೇ ಬಾಕಿ ಇರುವಾಗ ದಿವ್ಯ ಉರುಡುಗ ಹೊರಬಂದಿದ್ದಾರೆ.
ವಾರದ ಮಧ್ಯದಲ್ಲಿ ನಡೆಯುವ ಎಲಿಮಿನೇಷನ್ ನಲ್ಲಿ ದಿವ್ಯ ಉರುಡುಗ ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮ ಮುಕ್ತಾಯದ ಹಂತ ತಲುಪಿದ್ದು, ಇದೆ ಶುಕ್ರವಾರ ಮತ್ತು ಶನಿವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಆರ್ಯವರ್ಧನ್, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಉಳಿದುಕೊಂಡಿದ್ದಾರೆ.
ಈ ಐವರ ಪೈಕಿ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಫೈನಲ್ ಗೆ ಎಂಟ್ರಿ ಕೊಡಲಿದ್ದಾರೆ ಎಂದು ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ.
ಸದ್ಯ ದಿವ್ಯ ಹೊರಬಂದಿದ್ದು, ಫೈನಲ್ ಗೆ ಹೋಗುವ ಇನ್ನುಳಿದ ಮೂವರು ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ.
More