Tap to Read ➤

ದಾಖಲೆ ಸೃಷ್ಟಿಸಿದ ಕೆಜಿಎಫ್ ವರ್ಸ್ - ಮೆಟಾವರ್ಸ್ ಟೋಕನ್ಸ್ ದಾಖಲೆ ವೇಗದಲ್ಲಿ ಮಾರಾಟ

ಕೆಜಿಎಫ್ ಚಿತ್ರ ಮೆಟಾವರ್ಸ್ ಜಗತ್ತಿಗೆ ಎಂಟ್ರಿ ಕೊಟ್ಟಿದ್ದು, ರಾಕಿ ಭಾಯಿ ಜಗತ್ತಿಗೆ ನೀವು ಹೋಗಬಹುದು. ಕೆಜಿಎಫ್ ವರ್ಸ್ ಟೋಕನ್ಸ್ ದಾಖಲೆ ವೇಗದಲ್ಲಿ ಮಾರಾಟವಾಗಿದೆ.
ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಎಪ್ರಿಲ್ 14 ರಂದು ಬಿಡುಗಡೆಯಾಗಲಿದ್ದು, ಚಿತ್ರತಂಡ ಹಲವು ರೀತಿಗಳಲ್ಲಿ ಪ್ರಮೋಷನ್ ಮಾಡುತ್ತಿದೆ.
ಚಿತ್ರದ ಪ್ರಮೋಷನ್ ಭಾಗವಾಗಿ ಕೆಜಿಎಫ್ ತಂಡ ಮೆಟಾವರ್ಸ್ ಜಗತ್ತಿಗೆ ಕಾಲಿಟ್ಟಿದ್ದು, ಕೆಜಿಎಫ್ ವರ್ಸ್ ಅನ್ನು ಕ್ರಿಯೇಟ್ ಮಾಡಿ ಎಪ್ರಿಲ್ 7 ರಂದು ಲಾಂಚ್ ಮಾಡಿದೆ.
ಮೆಟಾವರ್ಸ್ ಎಂದರೆ ಅದೊಂದು ಡಿಜಿಟಲ್ ಜಗತ್ತು. ಇಲ್ಲಿ ರಿಯಲ್ ವ್ಯಕ್ತಿಗಳ ಡಿಜಿಟಲ್ ಅವತಾರವಿರುತ್ತೆ. ಇದ್ರಲ್ಲಿ ನಾವು ಕೂಡ ಒಂದು ಪಾತ್ರವಾಗಿ ಹೊರ ಜಗತ್ತಿನಂತೆ ಹಲವಾರು ಕಾರ್ಯಗಳನ್ನು ಮಾಡಬಹುದು. ಹಾಗೇ ಗೇಮ್ಸ್ ಗಳನ್ನು ಸೃಷ್ಟಿ ಮಾಡಿ ಆಡಬಹುದು.
ಕೆಜಿಎಫ್ ವರ್ಸ್ ನಲ್ಲಿ ಭಾಗಿಯಾಗಲು, ನೀವು ಹಣ ಪಾವತಿಸಿ ಎನ್‌ಎಫ್‌ಟಿ ಟೋಕನ್ಸ್‌ಗಳನ್ನು ಖರೀದಿಸಬೇಕು. ಇದೊಂದು ಭವಿಷ್ಯದ ಕರೆನ್ಸಿಯಾಗಿದೆ.
KGFverse Roadmap
ಕೆಜಿಎಫ್ ವರ್ಸ್ ಗೆ ಪ್ರವೇಶ ಮಾಡಲು ಮೊದಲು ನೀವು ಎಲ್‌ಡೊರಾಡೋ ಪುಸ್ತಕವನ್ನು ಖರೀದಿಸಬೇಕು. ಇದೊಂದು ವರ್ಚುವಲ್ ಪುಸ್ತಕ.
ಕೆಜಿಎಫ್ ವರ್ಸ್ ಪ್ರಸ್ತುತ ಕೇವಲ 10 ಸಾವಿರ ಟೋಕನ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಸಾವಿರಕ್ಕೂ ಹೆಚ್ಚು ಟೋಕನ್ ಗಳು ಅತಿ ವೇಗವಾಗಿ ಮಾರಾಟವಾಗಿವೆ.
KGFverse

Your browser doesn't support HTML5 video.

ಇದರ ಕುರಿತಾಗಿ ಹೊಂಬಾಳೆ ಫಿಲಂಸ್ ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಕೆಜಿಎಫ್ ವರ್ಸ್ ಗೆ ಹೇಗೆ ಪ್ರವೇಶ ಪಡೆಯಬೇಕು ಎಂಬುದನ್ನು ಹೇಳಿದೆ.
KGF Chapter 2 Videos
ಪ್ರಸ್ತುತ ಚಿತ್ರತಂಡ ದೆಹಲಿ, ಮುಂಬೈ, ಚೆನ್ನೈ ಮುಂತಾದ ಭಾರತದ ಪ್ರಮುಖ ನಗರಗಳಲ್ಲಿ ಪ್ರಚಾರ ಆರಂಭಿಸಿದ್ದು, ಮುಂದಿನ ವಾರ ಕರ್ನಾಟಕದಾದ್ಯಂತ ಪ್ರಚಾರ ಮಾಡಲಿದೆ.
Credits
Hombale Films