Tap to Read ➤

ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ & ಯಶ್ ಫ್ಯಾನ್ಸ್ ಕಿತ್ತಾಟ - ಯಾರು ಸುಲ್ತಾನ್ ?

ಸೋಷಿಯಲ್ ಮೀಡಿಯಾದಲ್ಲಿ ಬಾಕ್ಸಾಫೀಸ್ ಸುಲ್ತಾನಾ ಟೈಟಲ್ ಗಾಗಿ ದರ್ಶನ್ ಮತ್ತು ಯಶ್ ಫ್ಯಾನ್ಸ್ ವಾರ್ ಆರಂಭವಾಗಿದೆ. ಏನಿದರ ಹಿನ್ನಲೆ, ಇಲ್ಲಿ ತಿಳಿಯಿರಿ.
ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ವಿಶ್ವಾದ್ಯಂತ ದಾಖಲೆ ಬರೆದು, 1100 ಕೋಟಿ ಗಳಿಸಿದೆ.
ಕೇವಲ 25 ದಿನಗಳಲ್ಲೇ ಈ ದಾಖಲೆ ಬರೆದಿದ್ದು, ಈ ಕುರಿತು ಹೊಂಬಾಳೆ ಫಿಲಂಸ್ ಟ್ವೀಟ್ ಒಂದನ್ನು ಮಾಡಿತ್ತು.
ಹೊಂಬಾಳೆ The Box-Office Sulthan's rage continues' ಎಂದು ಬರೆದು, ಚಿತ್ರದ ವೀಡಿಯೋ ಒಂದನ್ನು ಶೇರ್ ಮಾಡಿತ್ತು,
ಈ ಟ್ವೀಟ್ ದರ್ಶನ್ ಫ್ಯಾನ್ಸ್ ಸಿಟ್ಟಿಗೆ ಕಾರಣವಾಗಿದೆ. ಏಕೆಂದರೆ ಮೊದಲಿನಿಂದಲೂ ಈ ಟೈಟಲ್ ದರ್ಶನ್ ಫ್ಯಾನ್ಸ ಬಳಸುತ್ತಿದ್ದಾರೆ.
ಬುಲ್ ಬುಲ್ ಚಿತ್ರದ ಸಮಯದಿಂದಲೂ ದರ್ಶನ್ ಚಿತ್ರಗಳ ಬಹುತೇಕ ಚಿತ್ರಗಳ ಪೋಸ್ಟರ್ ನಲ್ಲಿ ಈ ಟೈಟಲ್ ಇರುತ್ತದೆ.
ಸುದೀಪ್ ಕೂಡ ಮಾಣಿಕ್ಯ ಚಿತ್ರ ಅಭೂತಪೂರ್ವ ಯಶಸ್ಸು ಕಂಡ ಸಂದರ್ಭದಲ್ಲಿ ಮಾತನಾಡುತ್ತಾ ದರ್ಶನ್ ನಿಜವಾದ ಬಾಕ್ಸಾಫೀಸ್ ಸುಲ್ತಾನಾ' ಎಂದು ಹೇಳಿದ್ದರು.
ಆದರೆ ಈ ಟೈಟಲ್ ಈಗ ಹೊಂಬಾಳೆ ಫಿಲಂಸ್ ಬಳಸಿರುವುದಕ್ಕೆ ದರ್ಶನ್ ಫ್ಯಾನ್ಸ್ ಟ್ಟಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಕೆಲವು ಹ್ಯಾಷ್ ಟ್ಯಾಗ್ ಗಳ ಮೂಲಕ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಸುಲ್ತಾನಾ ಹಾಡು ಕೂಡ ಇರುವುದು ಹೊಂಬಾಳೆ ಇದನ್ನು ಬಳಸಿರುವುದಕ್ಕೆ ಕಾರಣವಿರಬಹುದು.
ಈ ಮೊದಲು ಕೂಡ ಯಶ್ ಮತ್ತು ದರ್ಶನ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಬಾಸ್ ಟೈಟಲ್ ಗೆ ಕಿತ್ತಾಡುತ್ತಿದ್ದರು. ಮಂಢ್ಯ ಎಲೆಕ್ಷನ್ ಟೈಮಲ್ಲಿ ಶಾಂತವಾಗಿದ್ದ ಈ ಪ್ಯಾನ್ ವಾರ್ ಈಗ ಮತ್ತೆ ಮುಂಚೂಣಿಗೆ ಬಂದಿದೆ.
ಇವೆಲ್ಲವುಗಳ ಬಗ್ಗೆ ತೆಲೆಕೆಡಿಸಿಕೊಳ್ಳದೇ ದರ್ಶನ್ ಮತ್ತು ಯಶ್ ಪರಸ್ಪರ ಸೌಹಾರ್ದಯುತ ಬಾಂಧವ್ಯ ಹೊಂದಿದ್ದಾರೆ.
Created by potrace 1.15, written by Peter Selinger 2001-2017
ಇಂತಹ ಇನ್ನಷ್ಟು ವರ್ಣರಂಜಿತ ಚಿತ್ರಗಳೊಂದಿಗೆ ನಿಮ್ಮ ನೆಚ್ಚಿನ ಸಿನಿ ಸುದ್ಧಿಗಳನ್ನು ಕನ್ನಡದಲ್ಲಿ ಓದಲು ಕೆಳಗಿನ ಲಿಂಕ್ ನ್ನು ಮೇಲಕ್ಕೆ ಜಗ್ಗಿ ಅಥವಾ ಲಿಂಕ್ ಮೇಲೆ ಕ್ಲಿಕ್ ಮಾಡಿ.