Tap to Read ➤

ತೆರೆ ಮೇಲೆ ಪರಮಾತ್ಮನ ರೂಪದಲ್ಲಿ ಬಂದ ಅಪ್ಪು

ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ನೆನಪುಗಳು ಎಂದಿಗೂ ಜೀವಂತ. ಇಂದು ಅವರು ನಟಿಸಿರುವ ಕೊನೆಯ ಚಿತ್ರ ತೆರೆಕಂಡಿದೆ.
sowmya malnad
ನಟ ಪುನೀತ್ ರಾಜ್​ಕುಮಾರ್​ ಅಭಿನಯದ ಕೊನೆಯ ಚಿತ್ರ 'ಲಕ್ಕಿಮ್ಯಾನ್'​​ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಈ ಸಿನಿಮಾದಲ್ಲಿ ಲವ್​ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್​ ಕೃಷ್ಣ, ಸಂಗೀತಾ ಶೃಂಗೇರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಸಿನಿಮಾವನ್ನು ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.
'ಲಕ್ಕಿಮ್ಯಾನ್' ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಅವರು ದೇವರ ಪಾತ್ರದಲ್ಲಿ ನಟಿಸಿದ್ದಾರೆ.
ದೇವರಾಗಿ ಕಾಣಿಸಿಕೊಂಡಿರುವ ಪುನೀತ್​ ರಾಜ್​ಕುಮಾರ್​ ಅವರಿಗೆ ಸಾಧುಕೋಕಿಲ ಸಾಥ್​ ನೀಡಿದ್ದಾರೆ. ಇಬ್ಬರ ಕಾಂಬಿನೇಷನ್​ನಲ್ಲಿ ಕಾಮಿಡಿ ದೃಶ್ಯಗಳು ಬಹಳ ಚೆನ್ನಾಗಿ ಮೂಡಿ ಬಂದಿವೆ.
ಚಿತ್ರದ ಹಾಡೊಂದಕ್ಕೆ ಪ್ರಭುದೇವ ಮತ್ತು ಪುನೀತ್​ ರಾಜ್​ಕುಮಾರ್ ಅವರು ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ.
'ಲಕ್ಕಿಮ್ಯಾನ್‌' ತಮಿಳಿನಲ್ಲಿ ತೆರೆಕಂಡ 'ಓ ಮೈ ಕಡವುಳೇ' ಸಿನಿಮಾದ ರಿಮೇಕ್ ಆಗಿದೆ.
ತೆರೆಯ ಮೇಲೆ ದೇವರ ರೂಪದಲ್ಲಿ ಅಪ್ಪು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.