Tap to Read ➤

ಯಂಗ್‌ ಏಜ್‌ನಲ್ಲಿಯೇ ಎಂಗೇಜ್‌ ಆದ ಸಿದ್ದು ಮೂಲಿಮನಿ, ಪ್ರಿಯಾ ಜೆ ಆಚಾರ್

'ಪಾರು' ಧಾರಾವಾಹಿಯ ಖ್ಯಾತಿಯ ಸಿದ್ದು ಮೂಲಿಮನಿ ಹಾಗೂ 'ಗಟ್ಟಿಮೇಳ' ಸೀರಿಯಲ್ ನ ಪ್ರಿಯಾ ಜೆ ಆಚಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಫೋಟೊಗಳು ಇಲ್ಲಿವೆ.
sowmya malnad
ಸತ್ಯ ಧಾರಾವಾಹಿಯ ಸಾಗರ್ ಗೌಡ ಎಂಗೇಜ್ ಆದ ಬೆನ್ನಲ್ಲೇ ಕಿರುತೆರೆಯ ಮತ್ತೊಂದು ಜೋಡಿ ಹಸೆಮಣೆ ಏರಲು ಸಜ್ಜಾಗಿದೆ.
'ಪಾರು' ಧಾರಾವಾಹಿಯ ಖ್ಯಾತಿಯ ಸಿದ್ದು ಮೂಲಿಮನಿ ಹಾಗೂ 'ಗಟ್ಟಿಮೇಳ' ಸೀರಿಯಲ್ ನ ಪ್ರಿಯಾ ಜೆ ಆಚಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಜೋಡಿ ನವೆಂಬರ್ 20ರಂದು ದಾವಣಗೆರೆಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದೆ. ದಾವಣಗೆರೆ ನಟಿ ಪ್ರಿಯಾ ಹುಟ್ಟೂರು.
ಡ್ಯಾನ್ಸ್ ಶೋವೊಂದರಲ್ಲಿ ಪರಿಚಿತರಾದ ಸಿದ್ದು ಮತ್ತು ಪ್ರಿಯಾ ನಂತರ ಧಮಾಕ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.
ಈ ವೇಳೆ ಇಬ್ಬರ ನಡುವೆ ಪ್ರೀತಿ ಶುರುವಾಗಿದ್ದು, ಇದೀಗ ಗುರುಹಿರಿಯರ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಪ್ರಿಯಾ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಯ ತಂಗಿ ಅದಿತಿ ಪಾತ್ರ ನಿರ್ವಹಿಸುತ್ತಿದ್ದಾರೆ.
ಸಿದ್ದು ಮೂಲಿಮನಿ 'ಪಾರು' ಧಾರಾವಾಹಿಯಲ್ಲಿ ಹೀರೋ ತಮ್ಮ ಪ್ರೀತುವಿನ ಪಾತ್ರ ನಿರ್ವಹಿಸುತ್ತಿದ್ದಾರೆ.
More