Tap to Read ➤

'ಹೆಡ್‌ಬುಷ್' ಸಿನಿಮಾ ರೈಟ್ಸ್ ದಾಖಲೆ ಬೆಲೆಗೆ ಮಾರಾಟ

ಡಾಲಿ ಧನಂಜಯ ಅಭಿನಯದ ಬಹುನಿರೀಕ್ಷಿತ 'ಹೆಡ್‌ ಬುಷ್' ಸಿನಿಮಾದ ಡಿಜಿಟಲ್, ಸ್ಯಾಟಲೈಟ್ ಹಾಗೂ ಥ್ರಿಯೇಟ್ರಿಕಲ್ ರೈಟ್ಸ್ ದಾಖಲೆಯ ಬೆಲೆಗೆ ಮಾರಾಟವಾಗಿದೆ.
sowmya malnad
'ಹೆಡ್‌ ಬುಷ್' ಸಿನಿಮಾದ ಡಿಜಿಟಲ್, ಸ್ಯಾಟಲೈಟ್ ಹಾಗೂ ಥ್ರಿಯೇಟ್ರಿಕಲ್ ರೈಟ್ಸ್ ದಾಖಲೆಯ ಬೆಲೆಗೆ ಮಾರಾಟವಾಗಿದೆ.
ಡಾಲಿ ಧನಂಜಯ್ 'ಹೆಡ್‌ ಬುಷ್' ಚಿತ್ರವನ್ನು ನಿರ್ಮಿಸಿ, ಡಾನ್ ಎಂ ಪಿ ಜಯರಾಜ್ ಪಾತ್ರದಲ್ಲಿ ನಟಿಸಿದ್ದಾರೆ.
ಬೆಂಗಳೂರು ಭೂಗತಲೋಕದ ನೈಜ ಕಥೆಯನ್ನು ಈ ಆಕ್ಷನ್ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ಹೇಳುವ ಪ್ರಯತ್ನ ನಡೀತಿದೆ.
ಕ್ರೇಜಿಸ್ಟಾರ್ ವಿ. ರವಿಚಂದ್ರನ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ಶೃತಿ ಹರಿಹರನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಇಷ್ಟು ದಿನ ಜಯರಾಜ್, ಕೊತ್ವಾಲರಂತಹ ನಟೋರಿಯಸ್ ಡಾನ್‌ಗಳ ಬಗ್ಗೆ ಕೇಳಿದ್ದವರು, ಈಗ ಅವರ ಆರ್ಭಟವನ್ನು ದೃಶ್ಯರೂಪದಲ್ಲಿ ನೋಡುವ ತವಕದಲ್ಲಿದ್ದಾರೆ.
ಸದ್ಯ ಜೀ ಸ್ಟುಡಿಯೋಸ್ ಸಂಸ್ಥೆ ಚಿತ್ರದ ಡಿಜಿಟಲ್, ಸ್ಯಾಟಲೈಟ್ ಹಾಗೂ ಥ್ರಿಯೇಟ್ರಿಕಲ್ ರೈಟ್ಸ್ ಕೊಂಡುಕೊಂಡಿದೆ. ದಾಖಲೆ ಬೆಲೆಗೆ ರೈಟ್ಸ್ ಮಾರಾಟವಾಗಿದೆ ಎಂದು ಚಿತ್ರತಂಡ ಹೇಳಿದೆ.
ಇದೇ 24 ರಂದು ಶಾರ್ಜಾದಲ್ಲಿ ರಾಜ್ ಕಪ್‌ ಕ್ರಿಕೆಟ್ ಪಂದ್ಯ ನಡೆಯಲಿದೆ. ಟೂರ್ನಿಯಲ್ಲಿ ಭಾಗಿಯಾಗಲೂ ನಟ ಧನಂಜಯ್ ವೈಟ್ ಆ್ಯಂಡ್ ವೈಟ್ ಬೆಲ್​ ಬಾಟಂ ಪ್ಯಾಂಟ್ ತೊಟ್ಟು ದುಬೈಗೆ ತೆರಳಿದ್ದಾರೆ.
ಅಕ್ಟೋಬರ್ 21ರಂದು 'ಹೆಡ್‌ ಬುಷ್' ಸಿನಿಮಾ ರಿಲೀಸ್ ಆಗಲಿದೆ.