Tap to Read ➤

ನಾಯಕಿಯಾಗಿ ಬೆಳ್ಳಿಪರದೆಗೆ ಕಾಲಿಟ್ಟ ಹಿಟ್ಲರ್ ನ ಲೀಲಾ - ಯಾವ ಚಿತ್ರ ?

ಹಿಟ್ಲರ್ ಕಲ್ಯಾಣ ಸೀರಿಯಲ್ ನ ಲೀಲಾ ಪಾತ್ರದ ಮೂಲಕ ಗಮನ ಸೆಳೆದಿರುವ ಮಲೈಕಾ ವಾಸುಪಾಲ್ ಈಗ ಚಂದನವನಕ್ಕೆ ನಾಯಕಿಯಾಗಿ ಪ್ರವೇಶಿಸುತ್ತಿದ್ದಾರೆ.
ಹಿಟ್ಲರ್ ಕಲ್ಯಾಣ ಸೀರಿಯಲ್ ನ ಲೀಲಾ ಪಾತ್ರದ ಮೂಲಕ ಕರ್ನಾಟಕದ ಮನೆ ಮಾತಾಗಿದ್ದಾರೆ ಮಲೈಕಾ ವಸುಪಾಲ್.
ಬೆಣ್ಣೆ ನಗರಿ ದಾವಣೆಗೆರೆಯಿಂದ ಹಲವಾರು ಆಡಿಷನ್ ಗಳಿಗೆ ಬಂದು ನಿರಾಶೆಯಾಗಿದ್ದ ಮಲೈಕಾಗೆ ಈಗ ಅದೃಷ್ಟ ಕೈ ಹಿಡಿದಿದೆ.
ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಉಪಾಧ್ಯಕ್ಷ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಚಿತ್ರದ ಮುಹೂರ್ತ್ ಜೂನ್ 15 ರಂದು ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೇರವೇರಿತು. ಅಧ್ಯಕ್ಷ ಚಿತ್ರದ ಮುಂದುವರೆದ ಭಾಗವಾಗಿ ಈ ಚಿತ್ರ ಮೂಡಿಬರಲಿದೆ.
ಪೋಷಕರ ಒತ್ತಾಸೆಯಿಂದಲೇ ಸಿವಿಲ್ ಇಂಜಿನಿಯರಿಂಗ್ ಮುಗಿಸಿದ್ದ ಮಲೈಕಾ ಚಿತ್ರರಂಗದಲ್ಲಿನ ಅವಕಾಶಗಳಿಗಾಗಿ ಕಾಯುತ್ತಿದ್ದರು.
ನಟಿಸಿದ ಮೊದಲ ಧಾರಾವಾಹಿಯಲ್ಲಿಯೇ ಖ್ಯಾತಿ ಪಡೆದ ಮಲೈಕಾ, ಈಗ ಉಮಾಪತಿ ಬ್ಯಾನರ್ ನಂತಹ ದೊಡ್ಡ ಸಂಸ್ಥೆ ಮೂಲಕ ಚಂದನವನ ಪ್ರವೇಶಿಸುತ್ತಿದ್ದಾರೆ.
ನಟನೆಯಷ್ಟೇ ಅಲ್ಲದೇ ಕಥಕ್ ಡ್ಯಾನ್ಸ್ ನಲ್ಲಿಯೂ ಪರಿಣಿತರು.