Tap to Read ➤

ವಾರಣಾಸಿಯ ಬೆಡಗಿ ಶಾನ್ವಿ ಶ್ರೀವಾತ್ಸವ್ ಕನ್ನಡದಲ್ಲಿ ನೆಲೆ ಕಂಡಿದ್ದು ಹೇಗೆ

ದೂರದ ವಾರಣಾಸಿಯಿಂದ ಬಂದು ಕನ್ನಡದಲ್ಲಿ ನೆಲೆ ಕಂಡುಕೊಂಡಿರುವ ಶಾನ್ವಿ ಶ್ರಿವಾತ್ಸವ್ ಸಿನಿ ಜೀವನ ಚಿತ್ರಣ.
ಶಾನ್ವಿ ಶ್ರೀವಾತ್ಸವ್ ಮೂಲತಃ ವಾರಣಾಸಿಯವರು.
1992 ಡಿಸೆಂಬರ್ 8 ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನಿಸಿದರು.
ಅಕ್ಕ ವಿಧಿಶಾ ಶ್ರೀವಾತ್ಸವ್ ಕೂಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಹೆಸರು ಗಳಿಸಿದ್ದಾರೆ.
ಅಜಂಗಢದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಮುಂಬೈನಲ್ಲಿ ಬಿ.ಕಾಮ್ ಡಿಗ್ರಿ ಪಡೆದರು.
2012 ರಲ್ಲಿ ತೆರೆಕಂಡ ತೆಲುಗು ಚಿತ್ರ ಲವಲೀ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ ಅಡ್ಡ ಎಂಬ ಚಿತ್ರದಲ್ಲಿ ನಟಿಸಿದರು.
2014 ರಲ್ಲಿ ಚಿರು ಸರ್ಜಾ ನಟಿಸಿದ ಚಂದ್ರಲೇಖಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.
ಇಲ್ಲಿಂದ ಕೆಲ ತೆಲಗು ಚಿತ್ರಗಳಲ್ಲಿ ನಟಿಸಿದರೂ, ಕನ್ನಡದಲ್ಲಿ ಮಾಸ್ಟರ್ ಪೀಸ್, ಸುಂದರಾಂಗ ಜಾಣ, ತಾರಕ್, ಮಫ್ತಿ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿ ತಮ್ಮ ನೆಲೆ ಭದ್ರ ಪಡಿಸಿಕೊಂಡರು.
ಮಾಸ್ಟರ್ ಪೀಸ್ ಮತ್ತು ತಾರಕ್ ಚಿತ್ರಗಳಲ್ಲಿನ ನಟನೆಗಾಗಿ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
ಪ್ರಸ್ತುತ ನಿವಿನ್ ಪೌಲಿ ನಟನೆಯ ಮಹಾ ವೀರ್ಯರ್' ಚಿತ್ರದ ಮೂಲಕ ಮಲಯಾಳಂ ಚಿತ್ರರಂಗ ಪ್ರವೇಶಿಸಿದ್ದಾರೆ.
Shanvi Beautiful Pics