Tap to Read ➤

ನಟ ರಮೇಶ್ ಅರವಿಂದ್ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿ ಹೀಗಿದೆ.
sowmya malnad
ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟ ರಮೇಶ್ ಅರವಿಂದ್
ರಮೇಶ್ ಅರವಿಂದ್ ಕನ್ನಡ, ತಮಿಳು, ತೆಲುಗು, ತುಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ರಮೇಶ್ ಅರವಿಂದ್ ಅಭಿನಯದ ಅಮೃತವರ್ಷಿಣಿ, ಅಮೆರಿಕ ಅಮೆರಿಕ, ಉಲ್ಟಾ ಪಲ್ಟಾ, ತುತ್ತಾ ಮುತ್ತಾ, ಆಪ್ತಮಿತ್ರ ಸೇರಿದಂತೆ ಹಲವು ಸಿನಿಮಾಗಳು 100 ದಿನಗಳ ಪ್ರದರ್ಶನ ಕಂಡಿವೆ.
ರಾಮ ಶ್ಯಾಮ ಭಾಮ, ಸತ್ಯವಾನ್ ಸಾವಿತ್ರಿ, ಆಕ್ಸಿಡೆಂಟ್, ವೆಂಕಟ ಇನ್ ಸಂಕಟ, ನಮ್ಮಣ್ಣ ಡಾನ್, ಉತ್ತಮ ವಿಲನ್, ಸುಂದರಾಂಗ ಜಾಣ, 100, ಪ್ಯಾರಿಸ್ ಪ್ಯಾರಿಸ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.
ನಿರೂಪಕರಾಗಿ ಪ್ರೀತಿಯಿಂದ ರಮೇಶ್, ರಾಜ ರಾಣಿ ರಮೇಶ್, ವೀಕೆಂಡ್ ವಿತ್ ರಮೇಶ್ ಹಾಗೂ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ನಿರೂಪಿದ್ದಾರೆ.
ನಟ ರಮೇಶ್ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನಂದಿನಿ ಎಂಬ ಧಾರಾವಾಹಿಯನ್ನು ನಿರ್ಮಿಸಿದ್ದರು. ಸದ್ಯ ಸುಂದರಿ ಎಂಬ ಧಾರಾವಾಹಿಯನ್ನು ಕೂಡ ನಿರ್ಮಿಸುತ್ತಿದ್ದಾರೆ.
ರಮೇಶ್ ನಟರಾಗುವುದಕ್ಕಿಂತ ಮೊದಲೇ ಅರ್ಚನಾ ಅವರನ್ನು ಪ್ರೀತಿಸಿದ್ದರು. 1991 ಜುಲೈ 7ರಂದು ಈ ಜೋಡಿ ಮದುವೆಯಾಗಿತ್ತು.
ನಟ ರಮೇಶ್ ಅರವಿಂದ್ ಅವರು ಅದ್ಭುತ ಭಾಷಣಕಾರ. ಅವರ ಭಾಷಣದ ಮೂಲಕ ಯುವಕರಲ್ಲಿ ಸ್ಫೂರ್ತಿ ತುಂಬುವ ಕೆಲಸವನ್ನು ಆಗಾಗ ಮಾಡುತ್ತಿರುತ್ತಾರೆ
ರಮೇಶ್ ಅರವಿಂದ್ ಬ್ರಾಂಡ್ ಅಂಬಾಸಿಡರ್ ಆಗಿಯೂ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.