Tap to Read ➤

ಕಿಚ್ಚನ 'ಮಡದಿ'ಗೆ ಬರ್ತ್​ಡೇ ಸಂಭ್ರಮ: ಇಲ್ಲಿವೆ ಇಂಟರೆಸ್ಟಿಂಗ್ ವಿಷಯಗಳು

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಕುರಿತ ಕೆಲ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.
sowmya malnad
ಪ್ರಿಯಾ ಕೇರಳದ ನಾಯರ್ ಕುಟುಂಬದಲ್ಲಿ ಜನಿಸಿದರು. ಆದರೆ, ಶಿಕ್ಷಣ ಹಾಗೂ ಬೆಳೆದಿದ್ದು ಬೆಂಗಳೂರಿನಲ್ಲಿ.
ಪ್ರಿಯಾ ರಾಧಾಕೃಷ್ಣ 2000ನೇ ಇಸವಿಯಲ್ಲಿ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿದ್ದರು.
ಬಳಿಕ 2001ರಲ್ಲಿ ಸುದೀಪ್ ಹಾಗೂ ಪ್ರಿಯಾ ಪ್ರೀತಿಸಿ ಮದುವೆಯಾದರು.
ಮದುವೆಗೂ ಮುನ್ನ ಪ್ರಿಯಾ ಅವರು ವಿಮಾನಯಾನ ಸಂಸ್ಥೆ ಮತ್ತು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು.
2015ರಲ್ಲಿ ಈ ಜೋಡಿ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿತ್ತು. ಇವರಿಬ್ಬರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲು ನಾಲ್ಕು ವರ್ಷ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಹೀಗಿದ್ದರೂ ಕೂಡ ಮಗಳಿಗಾಗಿ ಒಟ್ಟಿಗೆ ಸೇರುತ್ತಿದ್ದರು.
ನಂತರ ಇಬ್ಬರು ತಮ್ಮ ಮಗಳ ಸಲುವಾಗಿ ವಿಚ್ಛೇದನ ಪಡೆಯದಿರಲು ನಿರ್ಧರಿಸಿದರು.
ಪ್ರಿಯಾ ಸುದೀಪ್ ಮಾಣಿಕ್ಯ ಸಿನಿಮಾ ಹಾಗೂ ಅಶ್ವಿನಿ ನಕ್ಷತ್ರ ಧಾರಾವಾಹಿಯನ್ನು ನಿರ್ಮಿಸಿದ್ದಾರೆ.
ಇಂದು ಪ್ರಿಯಾ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
More