ನಟ ವಸಿಷ್ಠ ಸಿಂಹ ಕನ್ನಡ ಚಿತ್ರರಂಗದಲ್ಲಿ ತಮ್ಮ ಕಂಚಿನ ಕಂಠದ ಮೂಲಕವೇ ಗುರುತಿಸಿಕೊಂಡಿದ್ದಾರೆ. ವಸಿಷ್ಠ ಸಿಂಹ ಕುರಿತು ನಿಮಗೆ ಗೊತ್ತಿರದ ಒಂದಿಷ್ಟು ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.
sowmya malnad
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ವಸಿಷ್ಠ ಸಿಂಹ ಹುಟ್ಟಿದ್ದು ಹಾಸನದಲ್ಲಿ, ಬೆಳೆದಿದ್ದು ಮೈಸೂರಿನಲ್ಲಿ.
ವಸಿಷ್ಠ ಸಿಂಹ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.
ಇವರು ಮೊದಲು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ಬಳಿಕ ನಟನೆಗೆ ಎಂಟ್ರಿ ಕೊಟ್ಟರು.
ಮೊದಲು ಹುಬ್ಬಳ್ಳಿ ಹುಡುಗರು, ಆರ್ಯಾಸ್ ಲವ್ ಸಿನಿಮಾದಲ್ಲಿ ವಸಿಷ್ಠ ನಟಿಸಿದ್ದರು.
ಆದರೆ, ರಾಜಾಹುಲಿ, ರುದ್ರತಾಂಡವ ಚಿತ್ರಗಳು ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟವು.
ನಟ ವಸಿಷ್ಠ ಗಾಯಕರಾಗಿಯೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಡಿದ್ದಾರೆ.