Tap to Read ➤

ಧನ್ಯಾ ರಾಮ್‌ಕುಮಾರ್ ಗೆ ಹುಟ್ಟುಹಬ್ಬದ ಸಂಭ್ರಮ: ಇಲ್ಲಿವೆ ಇಂಟರೆಸ್ಟಿಂಗ್ ವಿಷಯಗಳು

ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಕುರಿತ ಕೆಲ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.
sowmya malnad
ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಧನ್ಯಾ ನಟ ರಾಮ್ ಕುಮಾರ್ ಹಾಗೂ ಪೂರ್ಣಿಮಾ ಅವರ ಮುದ್ದಿನ ಪುತ್ರಿ.
ಧನ್ಯಾ ತಮ್ಮ ತಂದೆ-ತಾಯಿಯ ಆಸೆಯಂತೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದರು.
ನಂತರ ಒಂದು ವರ್ಷಗಳ ಕಾಲ ಕಂಪನಿಯೊಂದಲ್ಲಿ ಕೆಲಸ ಮಾಡಿದರು.
ಇದರ ಜೊತೆಗೆ ಮಾಡೆಲಿಂಗ್ ಮಾಡುತ್ತಿದ್ದ ಅವರು, 'ನಿನ್ನ ಸನಿಹಕೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.
ಸಿನಿಮಾಗೂ ಮೊದಲು ನಟಿ ಧನ್ಯಾ ಅಭಿನಯ ತರಂಗದ ಗೌರಿ ದತ್ತು ಅವರ ಬಳಿ ನಟನೆ ಅಭ್ಯಾಸ ಮಾಡಿದ್ದಾರೆ.
ಇವರ ಸಹೋದರ ಧೀರೇನ್ ರಾಮ್‌ಕುಮಾರ್ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
More