Tap to Read ➤

ಬಿಗ್ ಬಾಸ್ ಸ್ಪರ್ಧಿ ಅರುಣ್ ಸಾಗರ್ ಕುರಿತ ಇಂಟರೆಸ್ಟಿಂಗ್ ವಿಷಯಯಗಳಿವು

ನಟ, ನಿರ್ದೇಶಕ, ನಿರೂಪಕ ಹಾಗೂ ಹಾಸ್ಯ ಕಲಾವಿದ ಬಿಗ್ ಬಾಸ್ ಸ್ಪರ್ಧಿ ಅರುಣ್ ಸಾಗರ್ ಕುರಿತ ಆಸಕ್ತಿಕರ ವಿಷಯಗಳು ಇಲ್ಲಿವೆ.
sowmya malnad
ಫೋಟೋ ಕೃಪೆ: ಕಲರ್ಸ್ ಕನ್ನಡ
ಅರುಣ್ ಸಾಗರ್ ನಟ, ನಿರ್ದೇಶಕ, ನಿರೂಪಕ ಹಾಗೂ ಹಾಸ್ಯ ಕಲಾವಿದ.
'ಭೂಮಿ ಗೀತ' ಎಂಬ ಪರಿಸರ ಸಂಬಂಧಿತ ಚಿತ್ರಕ್ಕೆ ಇವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಜೊತೆಗೆ ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಯೂ ದೊರಕಿದೆ.
ಅರುಣ್ ಸಾಗರ್ ಪುರಿ ಜಗನ್ನಾಥ್, ಮೆಹೆರ್ ರಮೇಶ್, ವೀರಶಂಕರ್ ಮತ್ತು ಕೆ.ರಾಘವೇಂದ್ರ ರಾವ್ ಸೇರಿದಂತೆ ಅನೇಕ ಖ್ಯಾತ ನಿರ್ದೇಶಕರ ಜೊತೆಗೆ ಕೆಲಸ ನಿರ್ವಹಿಸಿದ್ದಾರೆ.
ಇದರೊಂದಿಗೆ ಮರ್ಮ, ಪರ್ವ, ಚಂದು, ಜಸ್ಟ್ ಮಾತ್ ಮಾತಲ್ಲಿ, ರಾಮ್ , ನಂ 73 ಶಾಂತಿ ನಿವಾಸ, ವೀರ ಮದಕರಿ, ವಿಷ್ಣುವರ್ಧನ ಸೇರಿದಂತೆ 52 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅರುಣ್ ಸಾಗರ್ ಜೀ ಕನ್ನಡ, ಸುವರ್ಣ, ಕಸ್ತೂರಿ ಹೀಗೆ ಹಲವು ವಾಹಿನಿಗಳಲ್ಲಿ ನಿರೂಪಕನಾಗಿ ಕೆಲಸ ನಿರ್ವಹಿಸಿದ್ದಾರೆ.
ಅರುಣ್ ಸಾಗರ್ ಬಿಗ್ ಬಾಸ್ ಕನ್ನಡ ಸೀಸನ್ 1ರಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.
More