Tap to Read ➤

ನಟಿ ಕಾವ್ಯಶ್ರೀ ಗೌಡ ಕುರಿತ ಆಸಕ್ತಿಕರ ವಿಷಯಗಳು

ಬಿಗ್ ಬಾಸ್ ಕನ್ನಡ ಸೀಸನ್ 9ರ ಸ್ಪರ್ಧಿ, ನಟಿ ಕಾವ್ಯಶ್ರೀ ಗೌಡ ಬಗ್ಗೆ ನಿಮಗೆ ಗೊತ್ತಿರದ ಒಂದಿಷ್ಟು ವಿಷಯಗಳು ಇಲ್ಲಿವೆ.
sowmya malnad
ಮಂಗಳಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಶ್ರೀ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಭಾಗವಹಿಸಿದ್ದಾರೆ.
ಧಾರಾವಾಹಿಯಲ್ಲಿ ಅಳುಮುಂಜಿಯಾಗಿರುವ ಕಾವ್ಯಶ್ರೀ ಗೌಡ, ನಿಜ ಜೀವನದಲ್ಲಿ ತುಂಬಾ ಸ್ಟ್ರಾಂಗ್ ಅಂತೆ.
ಮೂಲತಃ ಚನ್ನಪಟ್ಟಣದ ಹುಡುಗಿಯಾಗಿರುವ ಕಾವ್ಯಶ್ರೀ, ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ.
ಕಾವ್ಯಶ್ರೀ ನಟನೆಗೆ ಬರುವ ಮುನ್ನ ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು.
ಓದುತ್ತಿರುವಾಗಲೇ ನಿರೂಪಣೆ ಕೆಲಸ ಮಾಡುತ್ತಿದ್ದ ಕಾವ್ಯಶ್ರೀ, ಡಿಗ್ರಿ ಮುಗಿಯುತ್ತಿದ್ದಂತೆ ಧಾರಾವಾಹಿಗಳಿಗೆ ಆಡಿಷನ್ಸ್ ನೀಡುತ್ತಿದ್ದರು.
ಮೊದಲ ಬಾರಿ ಮನೆಯೇ ಮಂತ್ರಾಲಯ ಧಾರಾವಾಹಿಯಲ್ಲಿ ಪುಟ್ಟ ಪಾತ್ರ ಮಾಡಿದ್ದ ಕಾವ್ಯಶ್ರೀ 'ಮಂಗಳಗೌರಿ ಮದುವೆ' ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನಟಿ ಕಾವ್ಯಶ್ರೀ ಗೌಡ ಅವರಿಗೆ ಓರ್ವ ಅಕ್ಕ ಇದ್ದಾರೆ.
ಇಬ್ಬರು ಹೆಣ್ಣು ಮಕ್ಕಳು ಅಂತ ಕಾವ್ಯಶ್ರೀ ಪಾಲಕರನ್ನು ಜನರು ತುಂಬಾ ಹಿಯಾಳಿಸುತ್ತಿದ್ದರಂತೆ. ಇದನ್ನು ಬಿಗ್ ಬಾಸ್ ಮನೆಯಲ್ಲಿ ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ.