ರಚನಾ ರೈ ಮೂಲತಃ ಮಂಗಳೂರಿನ ಪುತ್ತೂರಿನವರು. ಬಣ್ಣದ ಲೋಕಕ್ಕೆ ಇತ್ತೀಚೆಗೆ ಎಂಟ್ರಿಕೊಟ್ಟಿರುವ ಇವರು, ಒಳ್ಳೊಳ್ಳೆ ಅವಕಾಶ ಪಡೆಯುತ್ತಿದ್ದಾರೆ.
PC:Rachana Rai Instagram
ಕುಡ್ಲ ಸುಂದರಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದು, ಇವರು ಮಾಡೆಲ್ ಹಾಗೂ ಉತ್ತಮ ಭರತನಾಟ್ಯ ಕಲಾವಿದೆ ಕೂಡ ಹೌದು.
PC:Rachana Rai Instagram
ನಟನೆ, ನಾಟ್ಯದ ಜೊತೆಗೆ ಚಿತ್ರಕಲೆಯಲ್ಲೂ ರಚನಾ ರೈಗೆ ಸಾಕಷ್ಟು ಆಸಕ್ತಿಯಿದೆ. ಫುಟ್‌ಬಾಲ್, ಬ್ಯಾಡ್ಮಿಂಟನ್‌ನಲ್ಲೂ ಹೆಸರು ಗಳಿಸಿದ್ದಾರೆ.
PC:Rachana Rai Instagram
ಇದರ ಜೊತೆಗೆ ಬರಹಗಾರ್ತಿಯೂ ಆಗಿರುವ ರಚನಾ, ಓ ಮೈ ಡಾಗ್ ಎಂಬ ಪುಸ್ತಕ ಬರೆದಿರುವ ಸಕಲಕಲಾವಲ್ಲಭೆ.
PC:Rachana Rai Instagram
ಈ ನಟಿಗೆ ತುಳು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ರೂಪೇಶ್ ಶೆಟ್ಟಿ ನಟನೆಯ ಸರ್ಕಸ್ ಸಿನಿಮಾದಲ್ಲಿ ನಟಿಸಿ ಸಯ ಎನಿಸಿಕೊಂಡಿದ್ದರು.
PC:Rachana Rai Instagram
ಸದ್ಯ ಈ ನಟಿ 'ಡೆವಿಲ್' ಸಿನಿಮಾಗೆ ನಾಯಕಿಯಾಗಿದ್ದಾರೆ. ಆರಂಭದಿಂದಲೂ ಕನ್ನಡದ ನಟಿಗೆ ಅವಕಾಶ ನೀಡೋದಾಗಿ ಚಿತ್ರತಂಡ ಹೇಳಿತ್ತು.
PC:Rachana Rai Instagram
ಇದಕ್ಕೂ ಮುನ್ನ ಧನ್ವೀರ್ ಗೌಡ ನಾಯಕನಾಗಿ ನಟಿಸುತ್ತಿರುವ ವಾಮನ ಸಿನಿಮಾಗೆ ಆಯ್ಕೆಯಾಗಿದ್ದರು.
PC:Rachana Rai Instagram