Sowmya Bairappa       Apr 05, 2024

'ಪುಟ್ಟಕ್ಕನ ಮಕ್ಕಳು' ಸೀರಿಯಲ್‌ನ ಮುರಳಿ ಕುರಿತ ಕುತೂಹಲಕಾರಿ ವಿಷಯಗಳು ಇಲ್ಲಿವೆ.

ಮಲೆನಾಡಿನವರು

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮುರಳಿ ಪಾತ್ರಧಾರಿಯ ಹೆಸರು ಪವನ್ ಕುಮಾರ್. ಇವರು ಮಲೆನಾಡಿನವರು. 

Image Credit:Pavan Kumar Instagram

ಎಜುಕೇಷನ್

ಮೊದಲಿನಿಂದೂ ನಟನಾಗಬೇಕು ಎಂಬ ಕನಸು ಹೊಂದಿದ್ದ ಪವನ್, ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ.

Image Credit:Pavan Kumar Instagram

ಟೆಂಟ್ ಸಿನಿಮಾ

ಪವನ್ ನಟನೆಯನ್ನು ಸರಿಯಾಗಿ ಕಲಿಯಲು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾವನ್ನು ಸೇರಿಕೊಂಡು ತರಬೇತಿ ಪಡೆದುಕೊಂಡಿದ್ದಾರೆ.

Image Credit:Pavan Kumar Instagram

ಮೊದಲ ಧಾರಾವಾಹಿ

ಟೆಂಟ್ ಸಿನಿಮಾದಲ್ಲಿ 4 ತಿಂಗಳ ಕಾಲ ನಟನೆ ಕಲಿತ ಬಳಿಕ 'ಮಾದಕ' ಎಂಬ ಕಿರುತೆರೆ ಧಾರಾವಾಹಿಯಲ್ಲಿ ನಟಿಸಿ ಜನಮನ ಗೆದ್ದರು.

Image Credit:Pavan Kumar Instagram

ಹಲವು ಸೀರಿಯಲ್

ನಂತರ ಪತ್ತೆಧಾರಿ ಪ್ರತಿಭಾ, ನಾ ನಿನ್ನ ಬಿಡಲಾರೆ, ಮಹಾಕಾಳಿ, ಕಿನ್ನರಿ, ಆಕೃತಿ ಹೀಗೆ ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು.

Image Credit:Pavan Kumar Instagram

ವಿಲನ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ವಿಲನ್ ಆಗಿ ಕೂಡ ಅಬ್ಬರಿಸಿದ್ದರು.  

Image Credit:Pavan Kumar Instagram

ಸಿನಿಮಾ

ಕಿರುತೆರೆಯ ಮಾತ್ರವಲ್ಲದೇ ಸಂಚಿನ ಸುಳಿ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ. 

Image Credit:Pavan Kumar Instagram