Tap to Read ➤

ಸಂದರ್ಶನದ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ಹಿಂದಿ ನಿರೂಪಕ ಯಾರು?

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾವನ್ನು ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಯ ನಟರು ಕೂಡ ಕೊಂಡಾಡುತ್ತಿದ್ದಾರೆ. ಈ ಮಧ್ಯೆ ರೂಪಕನೋರ್ವ ರಿಷಬ್ ಶೆಟ್ಟಿ ಕಾಲಿಗೆ ಬಿದ್ದಿರುವ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
sowmya malnad
ಕಾಂತಾರ ಚಿತ್ರತಂಡ ಇತರೆ ರಾಜ್ಯಗಳಲ್ಲಿ ಭಾಗವಹಿಸಿದ ಪ್ರತಿ ಸಂದರ್ಶನ ಹಾಗೂ ಪತ್ರಿಕಾಗೋಷ್ಠಿಯಲ್ಲಿಯೂ ಸಹ ದೊಡ್ಡ ಮಟ್ಟದ ಪ್ರಶಂಸೆಯನ್ನೂ ಪಡೆದುಕೊಳ್ಳುತ್ತಿದೆ.
ಇತ್ತೀಚಿಗಷ್ಟೆ ತೆಲುಗು ಪತ್ರಿಕಾಗೋಷ್ಠಿ ವೇಳೆ ತೆಲುಗಿನ ಖ್ಯಾತ ನಿರ್ಮಾಪಕ, ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಕಾಂತಾರ ಚಿತ್ರವನ್ನು ಹಾಡಿಹೊಗಳಿದ್ದರು.
ಸದ್ಯ ಹಿಂದಿ ಸಂದರ್ಶನದ ವೇಳೆ ನಿರೂಪಕ ಸೂರಜ್ ರಿಷಬ್ ಶೆಟ್ಟಿ ಕಾಲಿಗೆ ಬಿದ್ದಿರುವ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸೂರಜ್ ಕುಮಾರ್ 24 ವರ್ಷ ವಯಸ್ಸಿನ ಯುಟ್ಯೂಬರ್, ವಿಮರ್ಶಕ ಹಾಗೂ ಹಾಸ್ಯನಟ. ಮೂಲತಃ ಮಹಾರಾಷ್ಟ್ರದ ಮುಂಬೈನ ನಿವಾಸಿ.
ಸೂರಜ್ ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ ಹಾಗೂ ನಟಿ ಸಪ್ತಮಿ ಗೌಡ ಅವರ ಸಂದರ್ಶನಕ್ಕೆ ಆಹ್ವಾನಿಸಿದ್ದರು.

Your browser doesn't support HTML5 video.

ಸಂದರ್ಶನವನ್ನು ಆರಂಭ ಮಾಡುವುದಕ್ಕೂ ಮುನ್ನ ರಿಷಬ್ ಶೆಟ್ಟಿ ಅವರನ್ನು ಎದ್ದೇಳಿ ಎಂದು ಅಪ್ಪುಗೆ ನೀಡಿ, ನಾನು ಅನೇಕ ಚಿತ್ರಗಳನ್ನು ನೋಡಿದ್ದೇನೆ. ಆದರೆ ಈ ಚಿತ್ರದಲ್ಲಿ ನಿಮ್ಮ ನಟನೆ ಮಾತ್ರ ಅತ್ಯದ್ಭುತ ಎಂದು ಕಾಲಿಗೆ ಬಿದ್ದಿದ್ದಾರೆ.
ಜೊತೆಗೆ ನಾನು ನಿಮ್ಮನ್ನು ನನ್ನ ಪ್ರೇಯಸಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಹೇಳಿದ್ದು, ಈ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.
More