Tap to Read ➤

300 ಕೋಟಿ ಕಲೆಕ್ಷನ್ ಮಾಡಿದ ವಿಕ್ರಮ್, ಸಾಲ ತೀರಿಸುವೆ ಎಂದ ಕಮಲ್ ಹಾಸನ್

ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ವಿಕ್ರಮ್ ಚಿತ್ರ ಬಾಕ್ಸಾಫೀಸಿನಲ್ಲಿ ಮೂರು ನೂರು ಕೋಟಿ ಗಳಿಸಿರುವ ಬಗ್ಗೆ ಮಾತನಾಡಿರುವ ಕಮಲ್, ನನ್ನೆಲ್ಲಾ ಸಾಲ ತೀರಿಸುವೆ ಎಂದಿದ್ದಾರೆ.
Created by potrace 1.15, written by Peter Selinger 2001-2017

ಜೂನ್ 3 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡ ತಮಿಳು ಚಿತ್ರ ವಿಕ್ರಮ್ ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಜೊತೆಗೆ, ಈ ಚಿತ್ರವನ್ನು ತಮ್ಮ ರಾಜಕಮಲ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಈ ಚಿತ್ರದಲ್ಲಿ ಕಮಲ್ ಜೊತೆಗೆ ಫಹಾದ್ ಫಾಸಿಲ್, ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೆ, ಸೂರಿಯ ರೋಲೆಕ್ಸ್ ಎಂಬ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಈಗ ಚಿತ್ರ ಬಾಕ್ಸಾಫೀಸಿನಲ್ಲಿ ಮೂರು ನೂರು ಕೋಟಿ ಗಳಿಸಿ ತನ್ನ ನಾಗಾಲೋಟ ಮುಂದುವರೆಸಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಈ ಬಗ್ಗೆ ಪ್ರೆಸ್ ಕಾನ್ಫರೆನ್ಸಿನಲ್ಲಿ ಮಾತನಾಡುತ್ತಾ, ಕಮಲ್ ಹಾಸನ್ ನನ್ನೆಲ್ಲಾ ಹಳೆಯ ಸಾಲವನ್ನು ತೀರಿಸುವೆ ಎಂದಿದ್ದಾರೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ನಾವೆಲ್ಲರೂ ಮುಂದುವೆರೆಯಬೇಕಾದರೆ, ದುಡ್ಡಿನ ಬಗ್ಗೆ ಯೋಚಿಸಿದ ನಾಯಕನಿರಬೇಕು. ಈ ಮೊದಲು ನಾನು ಮೂರು ನೂರು ಕೋಟಿಯನ್ನು ಒಂದು ಚಿಟಿಕೆಯಲ್ಲಿ ಗಳಿಸುತ್ತೇನೆ ಎಂದರೆ ಯಾರು ನಂಬುತ್ತಿರಲಿಲ್ಲ. ನಾನು ಸುಮ್ಮನೆ ಎದೆ ಬಡಿದುಕೊಳ್ಳುತ್ತಿದ್ದೇನೆ ಎಂದು ಕೊಂಡಿದ್ದರು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
'ಈಗ ನೋಡಿ, ಅದು ನಿಜವಾಗುತ್ತಿದೆ. ಇದರಿಂದ ನನ್ನ ಸಾಲವೆನ್ನೆಲ್ಲಾ ತೀರಿಸುವೆ, ನನ್ನ ಹೃದಯ ಬಯಸಿದ್ದನ್ನು ತಿನ್ನುವೆ ಮತ್ತು ಕುಟುಂಬ ಸ್ನೇಹಿತರಿಗೆ ಏನು ಬೇಕೋ ಅದನ್ನು ನೀಡುವೆ' ಎಂದಿದ್ದಾರೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಚಿತ್ರ ಬಿಡುಗಡೆಯಾಗಿ ಕೇವಲ ಹತ್ತು ದಿನಗಳಲ್ಲಿಯೇ ಮೂರು ನೂರು ಕೋಟಿ ಗಳಿಸಿದ್ದು, ಇನ್ನೂ ಬಾಕ್ಸಾಫೀಸಿನಲ್ಲಿ ಕೆಲ ದಾಖಲೆಗಳನ್ನು ಬರೆಯುವ ನಿರೀಕ್ಷೆಯಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಹಾಗೇ ಮುಂದುವರೆದು ' ನಾನಾರಿಗೋ ಸಹಾಯ ಮಾಡುತ್ತಿದ್ದೇನೆಂದು ಹೇಳಿಕೊಂಡು, ಒಳ್ಳೆಯ ವ್ಯಕ್ತಿ ಎನ್ನಿಸಿಕೊಳ್ಳುವ ಅವಶ್ಯಕತೆಯಿಲ್ಲ.' ಎಂದರು.