Tap to Read ➤

ಬುರ್ಜ್ ಖಲೀಫಾದ ಮೇಲೆ ಕಮಲ್ ಹಾಸನ್ ವಿಕ್ರಮ್ ಚಿತ್ರದ ಟ್ರೇಲರ್

ಕಮಲ್ ಹಾಸನ್, ಫಹಾದ್ ಫಾಸಿಲ್ ಮತ್ತು ವಿಜಯ್ ಸೇತುಪತಿ ಮುಖ್ಯ ಪಾತ್ರದಲ್ಲಿ ನಟಿಸಿರುವ ವಿಕ್ರಮ್ ಚಿತ್ರದ ಟ್ರೇಲರ್ ಬುರ್ಜ್ ಖಲೀಫಾ ಮೇಲೆ ಪ್ರದರ್ಶಿಸಲಾಯಿತು.
ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ವಿಕ್ರಮ್ ಚಿತ್ರದ ಇದೇ ಜೂನ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಫಹಾದ್ ಫಾಸಿಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ, ವಿಜಯ್ ಸೇತುಪತಿ ಖಳ ನಾಯಕನಾಗಿ ಮಿಂಚಿದ್ದಾರೆ.
ಸೂರ್ಯ ಶಿವಕುಮಾರ್ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ಚಿತ್ರದ ಟ್ರೇಲರ್ ಎರಡು ವಾರಗಳ ಹಿಂದೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.
ಚಿತ್ರದ ಪ್ರಮೋಷನ್ ಗೆ ಚಿತ್ರತಂಡ ಸಾಕಷ್ಟು ಶ್ರಮ ವಹಿಸಿದ್ದು, ಕೊನೆಯದಾಗಿ ಚಿತ್ರದ ಟ್ರೇಲರ್ ನ್ನು ಬುರ್ಜ್ ಖಲೀಫಾದ ಮೇಲೆ ಪ್ರದರ್ಶಿಸಿದೆ.
ಜಗತ್ತಿನ ಅತಿ ಎತ್ತರದ ಕಟ್ಟಡದ ಮೇಲೆ ಜೂನ್ 1 ರಂದು ವಿಕ್ರಮ್ ಚಿತ್ರದ ಟ್ರೇಲರ್ ಪ್ರದರ್ಶನವಾಯಿತು.
ಚಿತ್ರತಂಡದೊಂದಿಗೆ ಕಮಲ್ ಹಾಸನ್ ಕೂಡ ಈ ಘಟನೆಗೆ ಸಾಕ್ಷಿಯಾದರು.
ಈ ಆಕ್ಸನ್ ಥ್ರಿಲ್ಲರ್ ಚಿತ್ರವನ್ನು ಲೋಕೇಶ್ ಕಣಗರಾಜ್ ನಿರ್ದೇಶಿಸಿದ್ದು, ಕಮಲ್ ಹಾಸನ್ ಬಂಡವಾಳ ಹೂಡಿದ್ದಾರೆ.
ಕಿಚ್ಚ ಸುದೀಪ್ ರ ವಿಕ್ರಾಂತ ರೋಣ ಟೈಟಲ್ ಟೀಸರ್ ಕೂಡ ಬುರ್ಜ್ ಖಲೀಫಾ ಮೇಲೆ ಬಿಡುಗಡೆಯಾಗಿತ್ತು.