Tap to Read ➤

ಹೀರೋ ಆಗಲು 20 ಕೆಜಿ ತೂಕ ಇಳಿಸಿಕೊಂಡ ನಟ ಅಪ್ಪಣ್ಣ: ಹೇಗೆ ಗೊತ್ತಾ..?

ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಖ್ಯಾತಿಯ ಅಪ್ಪಣ್ಣ ಹೀರೋ ಆಗಲು 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ನೋಡೋದಕ್ಕೆ ದಪ್ಪವಿದ್ದ ಅಪ್ಪಣ್ಣ ಈಗ ಹೇಗಾಗಿದ್ದಾರೆ ಎಂಬುದನ್ನು ನೋಡಿ.
sowmya malnad
ಸುದೀಪ್ ನಟನೆಯ ಪೈಲ್ವಾನ್ ಸಿನಿಮಾದಲ್ಲಿ ಮಸ್ತ್ ಕಾಮಿಡಿ ಮಾಡಿದ್ದ ನಟ ಅಪ್ಪಣ್ಣ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ಅಪ್ಪಣ್ಣ ನೋಡುವುದಕ್ಕೆ ಸ್ವಲ್ಪ ದಪ್ಪ ಇದ್ದರು. ಆದ್ರೀಗ ಹೊಸ ಸಿನಿಮಾಕ್ಕಾಗಿ ಕಂಪ್ಲೀಟ್ ಬದಲಾಗಿದ್ದಾರೆ.
ಡಯಟ್ ಜೊತೆಗೆ ವರ್ಕ್​ಔಟ್ ಮಾಡುತ್ತಾ 20 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ.
ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಖ್ಯಾತಿಯ ಅಪ್ಪಣ್ಣ ಹೀರೋ ಆಗಿ ಮಿಂಚಲು ಸಿದ್ಧರಾಗಿದ್ದಾರೆ.
ಅಪ್ಪಣ್ಣ 'ಆ್ಯಪಲ್ ಕಟ್' ಸಿನಿಮಾದಲ್ಲಿ ಎರಡನೇ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ತಮ್ಮ ಪಂಚಿಂಗ್ ಡೈಲಾಗ್​ನಿಂದಲೇ ಕನ್ನಡ ಸಿನಿಮಾ ಪ್ರೇಕ್ಷಕರ ಮನಸು ಕದ್ದಿರುವ ಅಪ್ಪಣ್ಣ, ಈಗಾಗಲೇ 18 ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಬಣ್ಣ ಹಚ್ಚಿದ್ದಾರೆ.
ಆ್ಯಪಲ್ ಕಟ್ ಸಿನಿಮಾದಲ್ಲಿ ಇಬ್ಬರು ಹೀರೋಗಳಿದ್ದು, ಅದರಲ್ಲಿ ಹಾಸ್ಯ ನಟ ಅಪ್ಪಣ್ಣ ಕೂಡಾ ಒಬ್ಬರು.
More