Tap to Read ➤

ಎರಡು ಸಿನಿಮಾಗಳನ್ನು ಒಪ್ಪಿಕೊಂಡ ಕಾಂತಾರ ಚೆಲುವೆ

'ಕಾಂತಾರ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಸಪ್ತಮಿ ಗೌಡ ಅವರಿಗಂತೂ ಅದೃಷ್ಟ ಖುಲಾಯಿಸಿದ್ದು, ಅವಕಾಶಗಳ ಮೇಲೆ ಅವಕಾಶಗಳು ನಟಿಯನ್ನು ಅರಸಿ ಬರುತ್ತಿವೆ.
sowmya malnad
'ಕಾಂತಾರ' ಸಿನಿಮಾದ ಯಶಸ್ಸಿನಿಂದ ನಟಿ ಸಪ್ತಮಿ ಗೌಡಗೆ ಬೇರೆ ಸಿನಿಮಾಗಳ ಅವಕಾಶಗಳು ಒಂದರ ಹಿಂದೊಂದು ಅರಸಿ ಬರುತ್ತಿವೆ.
ಇದೇ ಖುಷಿಯಲ್ಲಿ ನಟಿ ಸಪ್ತಮಿ ಗೌಡ ಮೊನ್ನೆಯಿಂದ ದೈವಗಳ ಆಶೀರ್ವಾದ ಪಡೆಯಲು ಕುಟುಂಬದೊಂದಿಗೆ ಕರಾವಳಿಯ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.
ಇದೇ ವೇಳೆ ಸಪ್ತಮಿ ಗೌಡ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ್ದು ಈ ವೇಳೆ ಸೀರೆ ಉಟ್ಟು ಫೋಸ್ ಕೊಟ್ಟಿದ್ದಾರೆ.
ಕಾಂತಾರ ಚೆಲುವೆ ಸಪ್ತಮಿ ಗೌಡ ಅವರು ಸದ್ಯ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
ಅಂಬರೀಶ್ ಪುತ್ರ ಅಭಿಷೇಕ್ ಜೊತೆ 'ಕಾಳಿ' ಸಿನಿಮಾದಲ್ಲಿ ಸಪ್ತಮಿ ನಟಿಸಲಿದ್ದಾರೆ.
ಇದರ ಜೊತೆಗೆ ನಟ ಧನಂಜಯ್ ಜೊತೆಗೆ 'ಉತ್ತರಾಖಂಡ' ಸಿನಿಮಾದಲ್ಲಿಯೂ ಸಪ್ತಮಿ ನಟಿಸುತ್ತಿದ್ದಾರೆ.
Created by potrace 1.15, written by Peter Selinger 2001-2017
More