Tap to Read ➤

ಸಲಾರ್ ಮತ್ತು ಬಘೀರ ಸಿನಿಮಾದಲ್ಲಿ ಅವಕಾಶ ಪಡೆದ ಕಾಂತಾರ ನಟ

ಕಾಂತಾರ ಚಿತ್ರ ಪ್ರಪಂಚದಾದ್ಯಂತ ಪ್ರೇಕ್ಷಕರನ್ನು ಸೆಳೆದಿದೆ.ಈ ಸಿನಿಮಾದಲ್ಲಿ ದೈವ ಪಾತ್ರಿ ಪಾತ್ರ ನಿರ್ವಹಿಸಿದ್ದ ನವೀನ್ ಬೋಂದೆಲ್, ಇದೀಗ ಮತ್ತೆರಡು ದೊಡ್ಡ ಸಿನಿಮಾಗಳಲ್ಲಿ ನಟಿಸಲಿದ್ದಾರೆ.
sowmya malnad
ಕಾಂತಾರ ಚಿತ್ರದಲ್ಲಿ ಬಹುತೇಕ ಕರಾವಳಿಯ ಕಲಾವಿದರೇ ಇದ್ದು, ಸಣ್ಣ-ಸಣ್ಣ ಕಲಾವಿದರನ್ನೂ ಒಗ್ಗೂಡಿಸಿ ರಿಷಬ್ ಶೆಟ್ಟಿ ಚಿತ್ರ ಮಾಡಿದ್ದರು.
ಅದರಲ್ಲಿ ನವೀನ್ ಬೋಂದೆಲ್ ಕೂಡ ಒಬ್ಬರು. ನವೀನ್ ಕಾಂತಾರದಲ್ಲಿ ದೈವ ಪಾತ್ರಿ ಪಾತ್ರವನ್ನು ನಿರ್ವಹಿಸಿದ್ದರು.
ಬಿಳಿ ವಸ್ತ್ರವೊಂದನ್ನು ಸೊಂಟಕ್ಕೆ ಧರಿಸಿ, ಸಣ್ಣಗೆ ಕೂದಲು ಬಿಟ್ಟಿದ್ದ ವ್ಯಕ್ತಿಯೊಬ್ಬ ಓಹ್‌ ಎಂದು ಅಬ್ಬರಿಸುವ ದೃಶ್ಯ ಟ್ರೈಲರ್‌ನಲ್ಲಿಯೇ ಬಹಳ ಗಮನ ಸೆಳೆದಿತ್ತು.
ಸಿನಿಮಾದಲ್ಲಿಯೂ ಈ ಪಾತ್ರ ಗಮನ ಸೆಳೆದಿದೆ. ಈ ಪಾತ್ರವನ್ನು ನಿರ್ವಹಿಸಿದವರು ನವೀನ್ ಬೋಂದೆಲ್.
ಇವರ ಕಣ್ಣು ರಿಷಬ್‌ ಶೆಟ್ಟಿ ಅವರಿಗೆ ಇಷ್ಟವಾದ ಕಾರಣ ಆ ಪಾತ್ರಕ್ಕೆ ನವೀನ್ ಬೋಂದೆಲ್ ಅವರನ್ನು ಆಯ್ಕೆ ಮಾಡಿದ್ದರು.
ನವೀನ್ ಬೋಂದೆಲ್ ಬಹಳ ವರ್ಷ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದು, ನಂತರ ಸಾಕಷ್ಟು ನಾಟಕ ಹಾಗೂ ತುಳು ಸಿನಿಮಾಗಳಲ್ಲಿ​ ನಟಿಸಿದ್ದಾರೆ.
ಸದ್ಯ ನವೀನ್ ಬೋಂದೆಲ್ ಹೊಂಬಾಳೆ ಫಿಲ್ಸ್ಮ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಲಾರ್ ಮತ್ತು ಬಘೀರ ಸಿನಿಮಾದಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಈ ಎರಡು ಸಿನಿಮಾಗಳನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ.
More