Tap to Read ➤

'ಕಾಂತಾರ' ಸಿನಿಮಾದ ಬಗ್ಗೆ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಹೇಳಿದ್ದೇನು?

'ಕೆಜಿಎಫ್ 2' ಸಿನಿಮಾ ಬಳಿಕ ಹೊಂಬಾಳೆ ಫಿಲ್ಸ್ ನಿರ್ಮಾಣದ ಸಿನಿಮಾ 'ಕಾಂತಾರ' ರಿಲೀಸ್ ಆಗಿದೆ. ಅಂದ್ಕೊಂಡಿದ್ದಕ್ಕಿಂತ ಅದ್ಧೂರಿಯಾಗಿಯೇ ಸಿನಿಮಾ ರಿಲೀಸ್ ಆಗಿದೆ. ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
sowmya malnad
ಖಂಡಿತವಾಗಿಯೂ ಸಿನಿಮಾ ಹಿಟ್‌ ಆಗುತ್ತದೆ ಅದರ ಬಗ್ಗೆ ನನಗೆ ಡೌಟಿಲ್ಲ. 'ಕಾಂತಾರ' ಯಾವಾಗಲೂ ನೆನಪಿನಲ್ಲಿರುವ ಸಿನಿಮಾವಾಗುತ್ತದೆ ಎಂದು ರಕ್ಷಿತ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಸಿನಿಮಾ ಮುಗಿದ ಬಳಿಕ ರಕ್ಷಿತ್ ತಾವಿದ್ದ ಸ್ಥಳದಿಂದ ಜಿಗಿದು ಓಡೋಡಿ ಬಂದು ರಿಷಬ್‌ ಶೆಟ್ಟಿಯನ್ನು ತಬ್ಬಿಕೊಂಡಿದ್ದು, ರಿಷಬ್‌ ಕಣ್ಣೀರು ಹಾಕಿದ್ದಾರೆ.
ಕೆಲವೊಮ್ಮೆ ನೀವು ಒಂದು ಸಿನಿಮಾ ನೋಡಿದಾಗ ಮಾತುಗಳೇ ಬರುವುದಿಲ್ಲ. ಯಾಕೆಂದರೆ, ಆ ಚಿತ್ರ ನಿಮಗೆ ವರ್ಣಿಸಲಾಗದ, ಅನುಭವವನ್ನು ನೀಡುತ್ತದೆ. ರಿಷಬ್‌ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರವೂ ಅಂತಹ ಸಿನಿಮಾಗಳಲ್ಲಿ ಒಂದು ಎಂದು ನಟಿ ರಮ್ಯಾ 'ಕಾಂತಾರ'ವನ್ನು ಮಾತಿನಿಂದ, ಪದಗಳಿಂದದ ವರ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕಾಂತಾರ ವೀಕ್ಷಿಸಿದ ಟ್ವೀಟ್ ಮಾಡಿರುವ ಪುನೀತ್ ಪತ್ನಿ ಅಶ್ವಿನಿ ಅವರು, ಹೊಂಬಾಳೆ ಫಿಲ್ಮ್ಸ್ ಮತ್ತೊಮ್ಮೆ ಗೆದ್ದಿದೆ ಎಂದಿದ್ದಾರೆ. ರಿಶಬ್ ಶೆಟ್ಟಿ ನಟನೆಯನ್ನು ಹೊಗಳಿರುವ ಅವರು, ಉಳಿದ ಪಾತ್ರಧಾರಿಗಳನ್ನು ಸಹ ಮೆಚ್ಚಿಕೊಂಡಿದ್ದಾರೆ.
ಕಾಂತಾರ ಚಿತ್ರ ವೀಕ್ಷಿಸಿದ ವಿನಯ್ ರಾಜ್‍ಕುಮಾರ್ ಚಿತ್ರದ ಕಥೆಗೆ ಮನಸೋತಿದ್ದಾರೆ. ಚಿತ್ರದ ಗುಂಗಿನಲ್ಲೇ ಇದ್ದ ಅವರು ಚಿತ್ರದ ಬಗ್ಗೆ ಏನು ಹೇಳಬೇಕು ಅಂತಾನೆ ಗೊತ್ತಾಗ್ತಿಲ್ಲ ಚಿತ್ರ ಮಾತ್ರ ಸಿಂಪ್ಲಿ ಅಮೇಸಿಂಗ್ ಎಂದು ಕೊಂಡಾಡಿದ್ದಾರೆ.
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸಿನಿಮಾ ನೋಡಿ ತುಂಬಾ ಭಾವುಕಳಾಗಿದ್ದೇನೆ ಎಂದಿದ್ದಾರೆ.
ರಿಷಬ್ ಶೆಟ್ಟಿ ಅವರು ನಟ, ನಿರ್ದೇಶಕನಾಗಿ ಯಾವುದರಲ್ಲಿ ಬೆಸ್ಟ್ ಎಂದು ಹೇಳಲು ಆಗುತ್ತಿಲ್ಲ. ಅಷ್ಟು ಚೆನ್ನಾಗಿ ನಟಿಸುತ್ತಾರೆ, ನಿರ್ದೇಶಿಸುತ್ತಾರೆ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.
ಕೆಲ ಸಿನಿಮಾಗಳು ತಮ್ಮ ತನವನ್ನು ಎತ್ತಿ ಹಿಡಿಯುತ್ತವೆ. ಅದರಲ್ಲಿ 'ಕಾಂತಾರ' ಸಿನಿಮಾವೂ ಒಂದು ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ.
ಶೈನ್ ಶೆಟ್ಟಿ ಅವರು ಸಿನಿಮಾ ನೋಡಿ ಮುಗಿದ ಮೇಲೆ ಎದೆ ಧಗ್ ಧಗ್ ಎಂದಿದ್ದಾರೆ.
ನಟಿ ಅಮೂಲ್ಯ ಕೂಡ 'ಕಾಂತಾರ' ಸಿನಿಮಾವನ್ನು ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
more