Tap to Read ➤

777 ಚಾರ್ಲಿ ನೋಡಿ ಭಾವುಕರಾಗಿ ಕಣ್ಣೀರಿಟ್ಟ ಸಿಎಂ ಬಸವರಾಜ್ ಬೊಮ್ಮಾಯಿ

ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ ಚಿತ್ರವನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೋಡಿ ಮೆಚ್ಚಕೊಂಡಿದ್ದು, ಭಾವುಕರಾಗಿ ಕಣ್ಣೀರಿಟ್ಟರು.
ರಕ್ಷಿತ್ ಶೆಟ್ಟಿಯವರ 777 ಚಾರ್ಲಿ ದೇಶಾದ್ಯಂತ ಅಪಾರ ಮೆಚ್ಚುಗೆ ಪಡೆದಿದ್ದು, ಪ್ರಾಣಿಪ್ರಿಯರಿಂದ ಪ್ರಶಂಸೆ ಪಡೆಯುತ್ತಿದೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಮ್ಮ ಕೆಲ ಕ್ಯಾಬಿನೆಟ್ ಸಚಿವರೊಂದಿಗೆ ಚಿತ್ರವನ್ನು ವೀಕ್ಷಿಸಿದರು.
ಒರಾಯಲ್ ಮಾಲ್ ನಲ್ಲಿ ಸಿನಿಮಾ ವೀಕ್ಷಿಸಿದ ಬೊಮ್ಮಾಯಿವರು ತುಂಬಾ ಭಾವಕರಾದರು.
ಸಿಎಂ ಬಸವರಾಜ್ ಬೊಮ್ಮಾಯಿ ಮೊದಲಿನಿಂದಲೂ ತುಂಬಾ ಭಾವುಕ ಜೀವಿ ಮತ್ತು ಮೃದು ಸ್ವಭಾವದವರು.
ಬೊಮ್ಮಾಯಿವರು ಕೂಡ ಕೆಲ ದಿನಗಳ ಹಿಂದೆ ತಮ್ಮ ಸಾಕು ನಾಯಿಯನ್ನು ಕಳೆದುಕೊಂಡಿದ್ದು, ಅವರನ್ನು ಇನ್ನಷ್ಟು ಭಾವುಕರನ್ನಾಗಿಸಿತು.
ಚಿತ್ರವನ್ನು ನೋಡಿ ಮೆಚ್ಚಿದ ಮುಖ್ಯಮಂತ್ರಿಯವರು, ಕೆಲ ಕಾಲ ಗದ್ಗಗದಿತರಾಗಿ ಕಣ್ಣೀರಿಟ್ಟರು.
ಹಾಗೂ ಮುಂಬರುವ ದಿನಗಳಲ್ಲಿ ಬೀದಿ ನಾಯಿಗಳನ್ನು ನೋಡಿಕೊಳ್ಳುವ ಬಗ್ಗೆ ಯೋಜನೆಯೊಂದನ್ನು ರೂಪಿಸುವುದಾಗಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಎಂ 'ಭಾವುಕ ಚಿತ್ರ ಮಾಡಿಯೂ ಗೆಲ್ಲಬಹುದೆಂದು, ರಕ್ಷಿತ್ ತೋರಿಸಿದ್ದಾರೆ' ಎಂದು ಹೇಳಿದರು.
777 Charlie Box-Office Report