Tap to Read ➤

ದೀಪಾವಳಿಗೆ ಕಲರ್‌ಫುಲ್ ಲುಕ್ ಕೊಟ್ಟ ರಾಕಿಭಾಯ್ ಅಮ್ಮ

ದೀಪಾವಳಿ ಹಬ್ಬಕ್ಕೆ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ಹೊಸ ಫೋಟೋಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
sowmya malnad
ಫೋಟೋ ಕೃಪೆ: Nagaraj Somayaji
'ಕೆಜಿಎಫ್' ಸಿನಿಮಾದಲ್ಲಿ ಅಮ್ಮನ ಪಾತ್ರದಲ್ಲಿ ನಟಿಸಿದ್ದ ಅರ್ಚನಾ ಜೋಯಿಸ್ ದೀಪಾವಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.
ಅರ್ಚನಾ ಜೋಯಿಸ್ 'ಕೆಜಿಎಫ್' ಸಿನಿಮಾದಲ್ಲಿ ರಾಕಿಭಾಯ್ ಅಮ್ಮನ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಮೆಗಾ ಬ್ಲಾಕ್‌ಬಸ್ಟರ್ ಪ್ಯಾನ್ ಇಂಡಿಯಾ ಸಿನಿಮಾ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ.
ಸದ್ಯ ದೀಪಾವಳಿ ಸಂಭ್ರಮದಲ್ಲಿರುವ ಅರ್ಚನಾ ಜೋಯಿಸ್, ಹೊಸದೊಂದು ಫೋಟೊಶೂಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಬೆಳಕಿನ ಮಧ್ಯೆ ಕಲರ್‌ಫುಲ್ ಆಗಿ ಮಿಂಚಿರೋ ನಟಿ ಲುಕ್ ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಫೋಟೊಶೂಟ್ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದು, ದೀಪಾವಳಿ ಪ್ರಯುಕ್ತ ಈ ಫೋಟೊಶೂಟ್ ಮಾಡಲಾಗಿದೆ.
ದೀಪಾವಳಿ ಅಂದ್ರೆ ಬೆಳಕು ಅದನ್ನೇ ಥೀಮ್ ಆಗಿಸಿಕೊಂಡು ನಾಗರಾಜ್ ಸೋಮಯಾಜಿ ಫೋಟೊಶೂಟ್ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಸದ್ಯ ಇವರ ಹೊಸ ಸಿನಿಮಾ 'ಹೊಂದಿಸಿ ಬರೆಯಿರಿ' ಇದೇ ನವೆಂಬರ್ 18ರಂದು ಬಿಡುಗಡೆಯಾಗುತ್ತಿದೆ. 'ಕ್ಷೇತ್ರಪಾಲ' ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ.
More