Tap to Read ➤

ಪೆಪ್ಸಿ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್ ಆದ ಕನ್ನಡದ ರಾಕಿಭಾಯ್

ನಟ ಯಶ್ ಈಗ ಪೆಪ್ಸಿ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
sowmya malnad
KGF ರಾಕಿಭಾಯ್ ಆಗಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ ನಟ ಯಶ್ ಈಗ ಪೆಪ್ಸಿ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.
ಈ ವಿಚಾರವನ್ನು ರಾಕಿಂಗ್ ಸ್ಟಾರ್ ಯಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಪಾನ್ ಮಸಾಲಾ ಜಾಹೀರಾತಿನ ಬ್ರ್ಯಾಂಡ್ ಅಂಬಾಸಿಡರ್ ಆಗುವ ಅವಕಾಶವನ್ನು ನಿರಾಕರಿಸಿದ್ದರು.
ಇದಕ್ಕಾಗಿ ಆ ಸಂಸ್ಥೆ ಭಾರೀ ಮೊತ್ತದ ಸಂಭಾವನೆ ಕೊಡಲು ಮುಂದಾದರೂ ಯಶ್ ಒಪ್ಪಿರಲಿಲ್ಲ.
ಇದೀಗ ಪೆಪ್ಸಿ ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಇದೇ ಮೊದಲ ಬಾರಿಗೆ ಕನ್ನಡದ ನಟನೊಬ್ಬ ಈ ಹಂತಕ್ಕೆ ಏರಿದ್ದಾರೆ.
ಪೆಪ್ಸಿ ತಂಪು ಪಾನೀಯ ಸಂಸ್ಥೆ ಯಶ್ ಅವರನ್ನು ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಳ್ಳಲು ಭಾರೀ ಮೊತ್ತದ ಸಂಭಾವನೆ ನೀಡಿದೆ ಎನ್ನಲಾಗ್ತಿದೆ.
More