Tap to Read ➤

ಕಿಚ್ಚ ಸುದೀಪ್ ಸೀರಿಯಲ್ ಟು ಸಿನಿ ಜರ್ನಿ

ಕಿಚ್ಚ ಸುದೀಪ್ ಕನ್ನಡಲ್ಲಿ ಅಷ್ಟೇ ಅಲ್ಲ, ತೆಲುಗು ಹಾಗೂ ಬಾಲಿವುಡ್ ನಲ್ಲೂ​ ಉತ್ತಮ ಹೆಸರು ಮಾಡಿದ್ದಾರೆ. ಅಭಿನಯ ಚಕ್ರವರ್ತಿ ಸುದೀಪ್ ​ಚಿತ್ರರಂಗಕ್ಕೆ ಕಾಲಿಟ್ಟು ಇದೀಗ 25 ವರ್ಷ ಕಳೆದಿದೆ. ಅವರ ಸೀರಿಯಲ್ ಟು ಸಿನಿ ಜರ್ನಿಯ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
sowmya malnad
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ ಪ್ರೇಮದ ಕಾದಂಬರಿ ಮೂಲಕ ಕಿರುತೆರೆಗೆ ಸುದೀಪ್ ಪಾದಾರ್ಪಣೆ ಮಾಡಿದರು.
ತಾಯವ್ವ ಸಿನಿಮಾಗಿಂದ ಮೊದಲು ಬ್ರಹ್ಮ ಮತ್ತು ಕುಸುಮಬಾಲೆ ಸಿನಿಮಾದಲ್ಲಿ ನಟನೆ ಮಾಡಿದ್ದರು. ಆದ್ರೆ, ಈ ಸಿನಿಮಾಗಳು ಬಹಳ ಕಾಲ ರಿಲೀಸ್ ಆಗಲಿಲ್ಲ.
ತದನಂತರ ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸ್ಪರ್ಶ ಚಿತ್ರಕ್ಕಾಗಿ ಬಣ್ಣ ಹಚ್ಚಿದರು. 'ಸ್ಪರ್ಶ' ಸಿನಿಮಾ ಮೊದಲ ಹಿಟ್ ನೀಡಿತು.
ನಂತರ 2001ರಲ್ಲಿ ತೆರೆಗೆ ಬಂದ ಓಂ ಪ್ರಕಾಶ್ ರಾವ್ ನಿರ್ದೇಶನದ 'ಹುಚ್ಚ' ಸಿನಿಮಾ ಸುದೀಪ್ ಗೆ ಬಿಗ್ ಬ್ರೇಕ್ ನೀಡಿತು.
ಹುಚ್ಚ ಚಿತ್ರದಲ್ಲಿ ಸುದೀಪ್ ಅವರ ಪಾತ್ರದ ಹೆಸರು ಕಿಚ್ಚ. ಹೀಗಾಗಿ, ಅವರನ್ನು ಕಿಚ್ಚ ಸುದೀಪ್ ಎಂದು ಕರೆಯಲಾಗುತ್ತದೆ.
ಸುದೀಪ್ ಕೇವಲ ನಟ ಮಾತ್ರವಲ್ಲ, ಪ್ರತಿಭಾವಂತ ನಿರ್ದೇಶಕ ಕೂಡ ಆಗಿದ್ದಾರೆ. ಇವರು ನಿರ್ದೇಶಿಸಿದ ಮೈ ಆಟೋಗ್ರಾಫ್, ವೀರ ಮದಕರಿ, ಕೆಂಪೇಗೌಡ, ಮಾಣಿಕ್ಯ ಚಿತ್ರಗಳು ಭರ್ಜರಿ ಪ್ರದರ್ಶನಗೊಂಡಿವೆ.
ಸುದೀಪ್ ಬಾಲಿವುಡ್ ನ Phoonk, Rann, phoonk 2, Rakta charitra, Rakta charitra-2 ಹಾಗೂ Dabangg-3 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಎಸ್.ಎಸ್. ರಾಜಮೌಳಿ ನಿರ್ದೇಶನದ 'ಈಗ' ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದರು.
ನಟ ಸುದೀಪ್ ಕೇರಳ ಮೂಲದ ಪ್ರಿಯಾ ಅವರನ್ನು ಪ್ರೀತಿಸಿ ಮದುವೆಯಾದರು. ಈ ಜೋಡಿಗೆ ಸಾನ್ವಿ ಎಂಬ ಮಗಳಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿಯೂ ಸುದೀಪ್ ಸಕ್ರಿಯರಾಗಿದ್ದಾರೆ.
ಇದೀಗ ಕಿಚ್ಚ ಸುದೀಪ್​ ಅವರ ಸಾಧನೆಯನ್ನು ಗುರುತಿಸಲು ಭಾರತೀಯ ಅಂಚೆ ಇಲಾಖೆಯಿಂದ ‘ವಿಶೇಷ ಅಂಚೆ ಲಕೋಟೆ’ಬಿಡುಗಡೆ ಮಾಡಲಾಗುತ್ತಿದೆ.