Tap to Read ➤

ವಿಕ್ರಾಂತ್ ರೋಣ ಟ್ರೇಲರ್ 24 ಘಂಟೆಗಳಲ್ಲಿ ಯೂಟ್ಯೂಬ್ ನಲ್ಲಿ ಪಡೆದ ವೀವ್ಸ್ ಎಷ್ಟು ?

ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಟ್ರೇಲರ್ ಒಂದು ದಿನದಲ್ಲಿ ಯೂಟ್ಯೂಬ್ ನಲ್ಲಿ ಎಲ್ಲಾ ಭಾಷೆಗಳಲ್ಲಿ ಪಡೆದ ವೀವ್ಸ್ ಸಂಖ್ಯೆ ಇಲ್ಲಿದೆ.
Shrishail Mulawad
ಜೂನ್ 23 ರಂದು ಸಂಜೆ 5.02 ನಿಮಿಷಕ್ಕೆ ವಿಕ್ರಾಂತ್ ರೋಣ ಟ್ರೇಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಯಿತು.
ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಬಾಷೆಯಲ್ಲಿ ಬಿಡುಗಡೆಯಾಯಿತು.
ಚಿತ್ರದ ಟ್ರೇಲರ್ ಹಿಂದಿ ಭಾಷೆಯಲ್ಲಿ ಟೀ ಸೀರೀಸ್ ಚಾನೆಲ್ ನಲ್ಲಿ ಬಿಡುಗಡೆಯಾದರೆ, ಉಳಿದ ಭಾಷೆಗಳಲ್ಲಿ ಲಹರಿ ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಯಿತು.
ಟ್ರೇಲರ್ ಬಿಡುಗಡೆಯಾದ ಒಂದು ದಿನದಲ್ಲಿ ಯಾವ ಭಾಷೆಯಲ್ಲಿ ಎಷ್ಷು ವೀಕ್ಷಣೆ ಪಡೆದಿದೆ ಎಂಬ ಮಾಹಿತಿ ಇಲ್ಲಿದೆ.
ಹಿಂದಿಯಲ್ಲಿ ಟೀ ಸೀರಿಸ್ ಚಾನೆಲ್ ನಲ್ಲಿ 2.7 ಮಿಲಯನ್ ವೀಕ್ಷಣೆ ಪಡೆದರೆ, ಲಹರಿ ಮ್ಯೂಸಿಕ್ ಚಾನೆಲ್ ನಲ್ಲಿ 4.2 ಮಿಲಿಯನ್ ವೀಕ್ಷಣೆ ಪಡೆದು, ಒಟ್ಟು ಸುಮಾರು 7 ಮಿಲಿಯನ್ ವೀಕ್ಷಣೆ ಪಡೆದಿದೆ.
ಕನ್ನಡದಲ್ಲಿ 7.2 ಮಿಲಿಯನ್ ವೀಕ್ಷಣೆ ಪಡೆದರೆ, ತಮಿಳಿನಲ್ಲಿ 1.9 ಮಿಲಿಯನ್ ವೀಕ್ಷಣೆ ಪಡೆದಿದೆ.
ಹಾಗೇ ತೆಲುಗು ಭಾಷೆಯಲ್ಲಿ 3.5 ಮಿಲಿಯನ್ ವೀಕ್ಷಣೆ ಪಡೆದರೆ, ಮಲಯಾಳಂನಲ್ಲಿ 1.3 ಮಿಲಿಯನ್ ವೀಕ್ಷಣೆ ಪಡೆದಿದೆ.
ಇಂಗ್ಲೀಷ್ ಭಾಷೆಯಲ್ಲಿ ಜೀ ಸ್ಟುಡಿಯೋಸ್ ಚಾನೆಲ್ ನಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದರೆ, ಲಹರಿ ಮ್ಯೂಸಿಕ್ ಚಾನೆಲ್ ನಲ್ಲಿ .45 ಮಿಲಿಯನ್ ವೀಕ್ಷಣೆ ಪಡೆದಿದೆ.