Tap to Read ➤

ಅಜಯ್ ದೇವಗನ್ ಗೆ ಖಡಕ್ ಉತ್ತರ ನೀಡಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನ ಸಿಂಗಂ ಅಜಯ್ ದೇವಗನ್ ನಡುವೆ ಟ್ವಿಟ್ಟರ್ ವಾರ್ ನಡೆದಿದೆ. ಅಜಯ್ ಗೆ ಸುದೀಪ್ ಉತ್ತಮ ತಿರುಗೇಟು ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಸುದೀಪ್ ಇತ್ತಿಚಿಗೆ ನಡೆದ ಒಂದು ಕಾರ್ಯಕ್ರಮದಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ಮಾತಾಡುತ್ತಾ ಹಿಂದಿ ಈಗ ಒಂದು ರಾಷ್ಟ್ರಭಾಷೆಯಾಗಿ ಉಳಿದಿಲ್ಲ' ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಬಾಲಿವುಡ್ ನ ಸಿಂಗಂ ಅಜಯ ದೇವಗನ್ ಹಿಂದಿ ರಾಷ್ಟ್ರಭಾಷೆಯಲ್ಲದಿದ್ದರೆ, ನೀವು ನಿಮ್ಮ ಚಿತ್ರಗಳನ್ನು ಹಿಂದಿಗೆ ಏಕೆ ಡಬ್ ಮಾಡುತ್ತೀರಿ. ಹಿಂದಿ ನಮ್ಮ ರಾಷ್ಟ್ರ ಭಾಷೆಯಾಗಿತ್ತು, ಅದು ರಾಷ್ಟ್ರ ಭಾಷೆಯಾಗಿಯೇ ಇರುತ್ತದೆ'.
ಅಜಯ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸುದೀಪ್ ಇದನ್ನು ನೀವು ನಾನು ಹೇಳಿದ ಅರ್ಥಕ್ಕಿಂತ ಭಿನ್ನವಾಗಿ ಅರ್ಥೈಸಿಕೊಂಡಿದ್ದೀರಿ. ಮುಂದೆ ನೀವು ಸಿಕ್ಕಾಗ ಇದನ್ನು ವಿವರಿಸಲು ಪ್ರಯತ್ನಿಸುವೆ. ನನಗೆ ಸುಮ್ಮನೇ ಯಾರನ್ನು ಪ್ರಚೋದಿಸುವ ಅವಶ್ಯಕತೆಯಿಲ್ಲ.'
ಮತ್ತೇ ಮುಂದುವರೆಸುತ್ತಾ ನಾನು ಭಾರತದ ಪ್ರತಿ ಭಾಷೆಯನ್ನು ಗೌರವಿಸುತ್ತೇನೆ. ಈ ಟಾಪಿಕ್ ಇಲ್ಲಿಗೆ ಮುಗಿಯಲಿ ಎಂದು ಆಶಿಸುತ್ತೇನೆ. ನಿಮಗೆ ಶುಭ ಹಾರೈಕೆಗಳು.'
Created by potrace 1.15, written by Peter Selinger 2001-2017
ಮತ್ತೊಂದು ಟ್ವೀಟ್ ಮಾಡಿದ ಕಿಚ್ಚ ನಾನು ನೀವು ಮಾಡಿದ ಹಿಂದಿ ಟ್ವೀಟ್ ನ್ನು ಓದಿ ಅರ್ಥೈಸಿಕೊಂಡೆ. ಕಾರಣ ನಾನು ಹಿಂದಿ ಭಾಷೆಯನ್ನು ಗೌರವಿಸಿ ಕಲಿತಿದ್ದರಿಂದ. ಅದರೆ ನಿಮ್ಮ ಟ್ವೀಟ್ ಗೆ ಉತ್ತರವಾಗಿ ನಾನು ಕನ್ನಡದಲ್ಲಿ ಬರೆದಿದ್ದರೆ, ಸಂದರ್ಭ ಹೇಗಿರಿತ್ತಿತ್ತು.? ನಾವು ಭಾರತಕ್ಕೆ ಸೇರದವರಲ್ಲವೇ.?
ಅಜಯ್ ಪ್ರತಿಕ್ರಿಯಿಸುತ್ತಾ ' ಹೈ ಸುದೀಪ್, ನೀವು ಯಾವಾಗಲು ಸ್ನೇಹಿತರೆ. ನನ್ನ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸದ್ದಕ್ಕೆ ಧನ್ಯವಾದ. ನಾನು ಯಾವಾಗಲು ಚಿತ್ರರಂಗ ಒಂದೇ ಎಂದು ಭಾವಿಸಿರುವೆ. ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ. ಹಾಗೂ ಎಲ್ಲರೂ ನಮ್ಮ ಭಾಷೆಯನ್ನು ಗೌರವಿಸಲಿ ಎಂದು ಆಶಿಸುತ್ತೇವೆ. ಬಹುಶಃ ನಾನು ಅರ್ಥೈಸಿಕೊಂಡ ಭಾಷಾಂತರದಲ್ಲಿ ತಪ್ಪಾಗಿರಬಹುದು'.
ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್ ಭಾಷಾಂತರ ಮತ್ತು ವ್ಯಾಖ್ಯಾನಗಳು ಎಲ್ಲಾ ಒಂದು ದೃಷ್ಟಿಕೋನಗಳು. ಅದಕ್ಕೆ ವಿಷಯದ ಸಂಪೂರ್ಣ ಮಾಹಿತಿಯಿರದೇ, ಪ್ರತಿಕ್ರಿಯಿಸುವುದು ತಪ್ಪಾಗುತ್ತದೆ. ಇದಕ್ಕೆ ನಾನು ನಿಮ್ಮನ್ನು ದೂರಲಾರೆ. ನಿಮ್ಮಿಂದ ಬೇರೆ ರಚನಾತ್ಮಕವಾದ ಟ್ವೀಟ್ ಬಂದಿದ್ದರೆ, ನನಗೆ ತುಂಬಾ ಸಂತೋಷವಾಗಿರುತ್ತಿತ್ತು'.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಹೀಗೆ ಸುದೀಪ್ ಅಜಯ್ ದೇವಗನ್ ರ ತಪ್ಪು ಕಲ್ಪನೆಯನ್ನು ಸಾವಧಾನಕರ ವಿವೇಕಯುಕ್ತ ಮಾತುಗಳಿಂದ ಹೋಗಲಾಡಿಸಿದರು.
ಹೀಗೆ ಕುತೂಹಲಕಾರಿ ಕನ್ನಡ ಸಿನಿ ಸುದ್ಧಿಗಳನ್ನು ಚಿತ್ರದ ಸಮೇತ ಓದಲು ಕೆಳಗಿನ ಲಿಂಕ್ ನ್ನು ಮೇಲೆ ಜಗ್ಗಿ ಅಥವಾ ಕ್ಲಿಕ್ ಮಾಡಿ.