Tap to Read ➤

ಭಾರತದ ಖ್ಯಾತ ನಟರಿಂದ ವಿಕ್ರಾಂತ್ ರೋಣ ಟ್ರೇಲರ್ ಬಿಡುಗಡೆ

ಭಾರತದ ಖ್ಯಾತ ಸಿನಿತಾರೆಯರಿಂದ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಟ್ರೇಲರ್ ಆರು ಭಾಷೆಗಳಲ್ಲಿ ಬಿಡುಗಡೆಯಾಗಿದೆ.
Shrishail Mulawad
ಜೂನ್ 23 ರಂದು ವಿಕ್ರಾಂತ್ ರೋಣ ಟ್ರೇಲರ್ ಕನ್ನಡ, ತಮಿಳು,ತೆಲುಗು, ಹಿಂದಿ, ಮಲಯಾಳಂ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬಿಡುಗಡೆಯಾಯಿತು.
ಜೂನ್ 22ರಂದು ನಡೆದ ಚಿತ್ರದ ಕನ್ನಡ ಟ್ರೇಲರ್ ಸಮಾರಂಭದಲ್ಲಿ ಶಿವಣ್ಣ, ರವಿಚಂದ್ರನ್, ರಮೇಶ್, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ಧನಂಜಯ್ ಮುಂತಾದ ನಟರು ಭಾಗವಹಿಸಿ ಶುಭ ಹಾರೈಸಿದರು.
ಹಾಗೇ ಈ ನಟರೆಲ್ಲಾ ಜಾಕಲಿನ್ ಮತ್ತು ಸುದೀಪ್ ಜೊತೆಗೆ ರಾ ರಾ ರಕ್ಕಮ್ಮ ಗೀತೆಯ ಹೂಕ್ ಸ್ಟೆಪ್ ಹಾಕಿದ್ದು ವಿಶೇಷವಾಗಿತ್ತು.
ಹಿಂದಿಯಲ್ಲಿ ಚಿತ್ರದ ಟ್ರೇಲರ್ ನ್ನು ಸಲ್ಮಾನ್ ಖಾನ್ ಡಿಜಿಟಲ್ ಲಾಂಚ್ ಮಾಡಿದರು.
ಟ್ರೇಲರ್ ನ್ನು ತಮಿಳಿನಲ್ಲಿ ನಟ ಧನುಷ್ ಬಿಡುಗಡೆ ಮಾಡಿದರು,
ತೆಲುಗು ಭಾಷೆಯಲ್ಲಿ ರಾಮಚರಣ್ ಬಿಡುಗಡೆ ಮಾಡಿದರು.
ಮಲಯಾಳಂ ನಲ್ಲಿ ನಟ ಡುಲ್ಕರ್ ಸಲ್ಮಾನ್ ಬಿಡುಗಡೆ ಮಾಡಿದರು.
ಇದೇ ಜುಲೈ 28 ರಂದು ತೆರೆಗೆ ಬರಲಿರುವ ಈ ಚಿತ್ರ ಸಂಪೂರ್ಣ 3D ಯಲ್ಲಿ ಮೂಡಿಬಂದಿದ್ದು, ಉತ್ತಮ ಗ್ರಾಫಿಕ್ಸ್ ಹೊಂದಿದ್ದು, ಅಪಾರ ನಿರೀಕ್ಷೆ ಮೂಡಿಸಿದೆ.