Tap to Read ➤

2022ರಲ್ಲಿ ನಿಧನರಾದ ಭಾರತೀಯ ಸೆಲೆಬ್ರಿಟಿಗಳು

ಅನೇಕ ಪ್ರಸಿದ್ಧ ಸೆಲೆಬ್ರಿಟಿಗಳು ನಿಧನರಾದ ಕಾರಣ 2022 ಭಾರತಕ್ಕೆ ಮರೆಯಲಾಗದ ವರ್ಷವಾಗಿದೆ. ವರ್ಷದಲ್ಲಿ ನಿಧನರಾದ ಭಾರತೀಯ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ
ಲೆಜೆಂಡ್‌ ಗಾಯಕಿ ಲತಾ ಮಂಗೇಶ್ಕರ್ ಬಹು ಅಂಗಾಂಗ ವೈಫಲ್ಯದಿಂದ ಫೆಬ್ರವರಿ 6ರಂದು ನಿಧನರಾದರು
ಪ್ರವೀಣ್ ಕುಮಾರ್ ಸೋಬ್ತಿ ಅವರು ಫೆಬ್ರವರಿ 6 ರಂದು ನಿಧರಾದರು, ಪೌರಾಣಿಕ ಪ್ರದರ್ಶನವಾದ ಮಹಾಭಾರತದಲ್ಲಿ ಭೀಮನ ಪಾತ್ರದಲ್ಲಿ ನಟಿಸಿ ಜನಪ್ರಿಯರಾಗಿದ್ದರು.
ರವೀನಾ ಟಂಡನ್ ಅವರ ತಂದೆ ಫೆಬ್ರವರಿ 11ರಂದು 85ನೇ ವಯಸ್ಸಿನಲ್ಲಿ ನಿಧನರಾದರು.
ಲೆಜೆಂಡ್ ಬಪ್ಪಿ ಲಹಿರಿ ಫೆಬ್ರವರಿ 2022 ರಲ್ಲಿ ಮುಂಬೈನಲ್ಲಿ 69ನೇ ವಯಸ್ಸಿನಲ್ಲಿ ನಿಧನರಾದರು.
ಸಂಧ್ಯಾ ಮುಖರ್ಜಿ ಹಿನ್ನೆಲೆ ಗಾಯಕಿ ಮತ್ತು ಸಂಗೀತಗಾರ್ತಿ ಆಗಿದ್ದರು, ಇವರು ವಯೋಸಹಜ ಕಾಯಿಲೆಗಳಿಂದ 15 ಫೆಬ್ರವರಿ 2022ರಂದು ನಿಧನರಾದರು.
ಮಹೇಶ್ವರಿ ಅಮ್ಮ ನಟಿ, ಮಲಯಾಳಂ ಸಿನಿಮಾ ಮತ್ತು ರಂಗಭೂಮಿಯಲ್ಲಿ ಕೆಲಸ ಮಾಡಿದರು, ಫೆಬ್ರವರಿ 22ರಂದು 74ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದರು
ಟಿ ರಾಮರಾವ್ ಅವರು ಭಾರತೀಯ ಚಲನಚಿತ್ರ ನಿರ್ಮಾಪಕರಾಗಿದ್ದರು. ಅವರು ಏಪ್ರಿಲ್ 20 ರಂದು 83ನೇ ವಯಸ್ಸಿನಲ್ಲಿ ನಿಧನರಾದರು.
ಮೇ29ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಗಾಯಕ ಸಿಧು ಮೂಸ್ ವಾಲಾ(28 ವರ್ಷ) ರನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ ಹತ್ಯೆ ಮಾಡಿದರು.
ಜನಪ್ರಿಯ ಗಾಯಕ ಕೃಷ್ಣಕುಮಾರ್ ಕುನ್ನತ್ ಅಲಿಯಾಸ್ ಕೆಕೆ ಮೇ 31ರಂದು ಕೋಲ್ಕತಾದಲ್ಲಿ ನಿಧನರಾದರು.
More Stories