Tap to Read ➤

ಕಾಂತಾರ: ಆಕರ್ಷಕ ಕಣ್ಣುಗಳಿಂದ ಒಲಿದು ಬಂದ ನಟನೆ ಅವಕಾಶ!

ದೇಶಾದ್ಯಂತ ಕಾಂತಾರ ದಿನದಿಂದ ದಿನಕ್ಕೆ ನೂತನ ದಾಖಲೆಗಳನ್ನು ನಿರ್ಮಿಸುತ್ತಿದ್ದು, ಈ ಚಿತ್ರದ ಕೆಲವು ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿವೆ.
Shivam Muradimath
ಕಾಂತಾರದಲ್ಲಿ ಬಹುಪಾಲು ಕರಾವಳಿಯ ಕಲಾವಿದರನ್ನೂ ಒಗ್ಗೂಡಿಸಿ ರಿಷಬ್ ಶೆಟ್ಟಿ ಚಿತ್ರ ನಿರ್ಮಿಸಿದ್ದಾರೆ.
ಈ ಚಿತ್ರದಲ್ಲಿ ಕೆಲವು ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿವೆ.
ಅವುಗಳಲ್ಲಿ ನೈಸರ್ಗಿಕವಾದ ಕಣ್ಣುಗಳಿಂದ ಪ್ರೇಕ್ಷರಿಗೆ ರಂಜಿಸಿದವರೋಬ್ಬರು.
ಬಿಳಿ ವಸ್ತ್ರವೊಂದನ್ನು ಸೊಂಟಕ್ಕೆ ಸುತ್ತಿಕೊಂಡು ಉದ್ದ ಕೂದಲು ಬಿಟ್ಟಿದ್ದ ವ್ಯಕ್ತಿಯೊಬ್ಬ ಓಹ್‌... ಎಂದು ಅಬ್ಬರಿಸಿದ್ದರು.
ಆ ಪಾತ್ರದಲ್ಲಿ ಕಾಣಿಸಿಕೊಂಡವರ ಹೆಸರು ನವೀನ್ ಬೋಂದೆಲ್.
ನವೀನ್ ಅವರ ಕಣ್ಣು ಇಷ್ಟವಾದ ಕಾರಣಕ್ಕೆ ಚಿತ್ರದಲ್ಲಿ ನಟಿಸಲು ರೀಷಬ್ ಅವಕಾಶ ನೀಡಿದ್ದರು.
ನವೀನ್ ಈ ಹಿಂದೆ ಖಾಸಗಿ ಬಸ್‌ಗಳಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಬಿಡುವಿನ ವೇಳೆಯಲ್ಲಿ ನಾಟಕ ರಂಗದಲ್ಲಿ ತೊಡಗಿಸಿಕೊಂಡಿದ್ದ, ನವೀನ್ ತುಳುವರೆ ತುಡರ್ ಸುರತ್ಕಲ್ ಎಂಬ ತಂಡದೊಂದಿಗೆ ಗುರುತಿಸಿಕೊಂಡಿದ್ದಾರೆ.
Click here