Tap to Read ➤

ರಿಷಬ್ ಶೆಟ್ಟಿ ಸೈಡ್ ರೋಲ್ ಮಾಡಿದ್ದ 8 ಸಿನಿಮಾಗಳು

ರಿಷಬ್ ಶೆಟ್ಟಿ ನಾಯಕನಾಗುವ ಮೊದಲು ಎಂಟು ಸಿನಿಮಾಗಳಲ್ಲಿ ಸೈಡ್ ರೋಲ್ ಮಾಡಿದ್ದರು. ಆ ಸಿನಿಮಾಗಳು ಯಾವವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
sowmya malnad
ರಿಷಬ್ ಶೆಟ್ಟಿ 2010ರಲ್ಲಿ 'ನಮ್ ಏರಿಯಾದಲ್ಲಿ ಒಂದಿನ' ಎಂಬ ಸಿನಿಮಾದಲ್ಲಿ ಹೆಸರಿಲ್ಲದ ಪಾತ್ರದಲ್ಲಿ ನಟಿಸಿದ್ದರು.
ನಂತರ 2012ರಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ತುಗಲಕ್ ಚಿತ್ರದಲ್ಲಿ ರಿಷಬ್ ಕೂಡ ಹೆಸರಿಲ್ಲದ ಪಾತ್ರ ನಿರ್ವಹಿಸಿದ್ದರು.
2013ರಲ್ಲಿ ಕಿಶೋರ್ ಹಾಗೂ ಅರ್ಜುನ್ ಸರ್ಜಾ ನಟಿಸಿದ್ದ ಅಟ್ಟಹಾಸ ಚಿತ್ರದಲ್ಲಿ ರಿಷಬ್ ಶೆಟ್ಟಿ ಪೊಲೀಸ್ ಪಾತ್ರವೊಂದನ್ನು ನಿರ್ವಹಿಸಿದ್ದರು.
ಬಳಿಕ ರಿಷಬ್ ಶೆಟ್ಟಿ ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರದಲ್ಲಿ ಪೊಲೀಸ್ ಪೇದೆ ಪಾತ್ರ ಮಾಡಿದ್ದರು.
2014ರಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನದ 'ಉಳಿದವರು ಕಂಡಂತೆ' ಚಿತ್ರದಲ್ಲಿ ರಿಷಬ್ ಶೆಟ್ಟಿ ರಘು ಎಂಬ ಪಾತ್ರದಲ್ಲಿ ನಟಿಸಿದ್ದರು.
2016ರಲ್ಲಿ ತೆರೆಕಂಡ ತಮ್ಮದೇ ನಿರ್ದೇಶನದ ಮೊದಲ ಸಿನಿಮಾ 'ರಿಕ್ಕಿ'ಯಲ್ಲಿ ಕೂಡ ರಿಷಬ್ ಶೆಟ್ಟಿ ಹೆಸರಿಲ್ಲದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.
2018ರಲ್ಲಿ ಬಿಡುಗಡೆಗೊಂಡ ತಮ್ಮದೇ ನಿರ್ದೇಶನದ ಮೂರನೇ ಚಿತ್ರ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು'ವಿನಲ್ಲಿ ರಿಷಬ್ ಶೆಟ್ಟಿ ಇನ್ಸ್ಪೆಕ್ಟರ್ ಕೆಂಪರಾಜು ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದರು.
2018ರಲ್ಲಿ ತೆರೆಕಂಡಿದ್ದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ನಿರ್ದೇಶಕನ ಪಾತ್ರ ನಿರ್ವಹಿಸಿದ್ದರು.