Tap to Read ➤

ಎರಡನೇ ಮದುವೆ ಬಗ್ಗೆ ಮೇಘನಾ ರಾಜ್ ಹೇಳಿದ್ದೇನು?

ಚಿರಂಜೀವಿ ಸರ್ಜಾ ಅಗಲಿದ ಬಳಿಕ ಆ ನೋವಿನಿಂದ ಮೇಘನಾ ರಾಜ್ ಹೊಸ ಬದುಕನ್ನು ನಿಧಾನವಾಗಿ ಮತ್ತೆ ಕಟ್ಟುಕೊಳ್ಳುತ್ತಿದ್ದಾರೆ. ಈ ಮಧ್ಯೆ ಅವರ ಮರು ಮದುವೆ ಬಗ್ಗೆಯೂ ಸುದ್ದಿ ಹಬ್ಬಿತ್ತು. ಈ ಬಗ್ಗೆ ನಟಿ ಮೇಘನಾ ಪ್ರತಿಕ್ರಿಯೆ ಹೀಗಿದೆ.
sowmya malnad
ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ 2018ರ ಮೇ 2ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಜೂನ್ 7, 2020ರಂದು ನಟಿ ಮೇಘನಾ ರಾಜ್ ಅವರ ಜೀವನ ದಿಕ್ಕೇ ಬದಲಾಯಿತು. ಚಿರಂಜೀವಿ ಸರ್ಜಾ ಅವರು ಕೇವಲ 39 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟರು.
ಮೇಘನಾ ರಾಜ್ ಅಕ್ಟೋಬರ್ 22, 2020ರಂದು ತಮ್ಮ ಮಗ ರಾಯನ್ ರಾಜ್ ಸರ್ಜಾಗೆ ಜನ್ಮ ನೀಡಿದರು.
ಆ ಬಳಿಕ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು.
ಎರಡನೇ ಮದುವೆ ಬಗ್ಗೆ ವದಂತಿಗಳು ಹರಿದಾಡುತ್ತಿರೋ ಬೆನ್ನಲ್ಲೇ ಮೇಘನಾ ರಾಜ್ ಚಿರಂಜೀವಿ ಸರ್ಜಾ ಹಾಗೂ ರಾಯನ್​ ರಾಜ್​ ಸರ್ಜಾ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.
ಇತ್ತೀಚೆಗೆ ಅಮಿತಾಭ್‌ ಬಚ್ಚನ್‌, ಧರ್ಮೇಂದ್ರ ಮುಂತಾದ ಗಣ್ಯರು ಪಡೆದಿರುವ ಪ್ರತಿಷ್ಠಿತ 'ಫಾಗ್ ಹೀರೋ' ಪ್ರಶಸ್ತಿಯು ಮೇಘನಾ ಅವರಿಗೆ ಈ ಸಿಕ್ಕಿದೆ.
ಸದ್ಯ ಮೇಘನಾ ರಾಜ್ ಅಮೆರಿಕದಲ್ಲಿದ್ದಾರೆ. ಅಲ್ಲಿನ ಕ್ಯಾಲಿಪೋರ್ನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.