Tap to Read ➤

ಹೊಸ ಮನೆ ಪ್ರವೇಶಿಸಿದ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ

'ಲವ್ ಮಾಕ್ಟೇಲ್' ಸಿನಿಮಾ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಹೊಸ ಮನೆಗೆ ಕಾಲಿಟ್ಟಿದ್ದು, ಅದರ ಫೋಟೋಗಳನ್ನು ಹಚ್ಚಿಕೊಂಡಿದ್ದಾರೆ.
sowmya malnad
'ಲವ್ ಮಾಕ್ಟೇಲ್' ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಹೊಸ ಮನೆ ಪ್ರವೇಶಿಸಿದ್ದಾರೆ.
ಮಿಲನಾ ಸೋಶಿಯಲ್ ಮೀಡಿಯಾದಲ್ಲಿ ಹೊಸ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹೊಸ ಮನೆಗೆ ಕ್ರಿಸ್‍ಮಿ ನೆಸ್ಟ್ ಎಂದು ಹೆಸರಿಟ್ಟಿದ್ದಾರೆ. ಕ್ರಿಸ್ ಎಂದ್ರೆ ಕೃಷ್ಣ, ಮಿ ಅಂದ್ರೆ ಮಿಲನಾ.
ಡಾರ್ಲಿಂಗ್ ಕೃಷ್ಣ, ಮಿಲನಾ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಕಷ್ಟಪಟ್ಟು ಗುರುತಿಸಿಕೊಂಡಿದ್ದಾರೆ.
6 ವರ್ಷಗಳಿಗೂ ಅಧಿಕ ಕಾಲ ಪ್ರೀತಿಸಿದ ಈ ಜೋಡಿ, 2021ರ ಫೆಬ್ರವರಿ 14 ರಂದು ವಿವಾಹವಾಗಿದ್ದರು.
ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿದ 'ಲವ್ ಮಾಕ್ಟೇಲ್' ಸಿನಿಮಾ ಅವರಿಗೆ ಸಾಕಷ್ಟು ಯಶಸ್ಸು ತಂದು ಕೊಟ್ಟಿತು.
ಅದಾದ ನಂತರದಲ್ಲಿ 'ಲವ್ ಮಾಕ್ಟೇಲ್ 2' ಕೂಡ ದೊಡ್ಡ ಹಿಟ್ ಆಯ್ತು.
ನಂತರದಲ್ಲಿ ಈ ಜೋಡಿಗೆ ಸಾಕಷ್ಟು ಆಫರ್‌ಗಳು ಅರಸಿ ಬಂದವು.
More