Tap to Read ➤

ಕಾಂತಾರ ನಿರ್ದೇಶಕ ರಿಷಬ್ ಶೆಟ್ಟಿ ಕುರಿತ ರೋಚಕ ಸಂಗತಿಗಳು!

ದೇಶಾದ್ಯಂತ ಬಾರಿ ಸದ್ದು ಮಾಡುತ್ತಿರುವ ಕಾಂತಾರ ಚಿತ್ರದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಕುರಿತು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ.
Shivam
ರಿಷಬ್ ಜುಲೈ 7, 1983 ರಂದು ಕರ್ನಾಟಕದ ಕುಂದಾಪುರದ ಕೆರಾಡಿ ಜನಿಸಿದರು.
ಬೆಂಗಳೂರಿನ ಸರ್ಕಾರಿ ಚಲನಚಿತ್ರ ಮತ್ತು ಟಿವಿ ಸಂಸ್ಥೆಯಿಂದ ಚಿತ್ರ ನಿರ್ದೇಶನದಲ್ಲಿ ಡಿಪ್ಲೊಮಾ ಪದವಿ ಹೊಂದಿರುವವರು.
A. M. R. ರಮೇಶ್ ಅವರೊಂದಿಗೆ ಸೈನೈಡ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.
ಅರವಿಂದ್ ಕೌಶಿಕ್‌ ಅವರೊಂದಿಗೆ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದ ರಿಷಬ್, ತುಗ್ಲಕ್‌ ಚಿತ್ರದಲ್ಲಿ ನಟಿಸುವ ಮೂಲಕ ಸಿನಿಮಾ ರಂಗ ಪ್ರವೇಶಿಸಿದರು.
ಕನ್ನಡದ ಖ್ಯಾತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಆಪ್ತ ವಲಯದಲ್ಲಿ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ.
ರಿಷಬ್ ಶೆಟ್ಟಿ 2016 ರಲ್ಲಿ ರಿಕ್ಕಿ ಚಿತ್ರದ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದರು, ಇದರಲ್ಲಿ ರಕ್ಷಿತ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
2016ರಲ್ಲಿ ರಿಷಬ್ ಶೆಟ್ಟಿ - ರಕ್ಷಿತ್ ಜೊತೆ ಕಿರಿಕ್ ಪಾರ್ಟಿ ಚಿತ್ರಕ್ಕೆ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದು ಉತ್ತಮ ಖ್ಯಾತಿಯನ್ನು ತಂದುಕೊಟ್ಟಿತು.
ರಿಷಬ್ 2017ರಲ್ಲಿ ಪ್ರಗತಿ ಶೆಟ್ಟಿಯನ್ನು ವಿವಾಹವಾಗಿದ್ದು, ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ.
ರಿಷಬ್ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಲನಚಿತ್ರ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
2019ರಲ್ಲಿ ಬೆಲ್ ಬಾಟಮ್ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು.
ರಿಷಬ್ ಶೆಟ್ಟಿ ಮುಂಬರುವ ದಿನಗಳಲ್ಲಿ ಬೆಲ್ ಬಾಟಮ್ 2, ಬ್ಯಾಚುಲರ್ ಪಾರ್ಟಿ ಮುಂತಾದ ಕೆಲವು ಆಸಕ್ತಿದಾಯಕ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Click here