Tap to Read ➤

ಕನ್ನಡದ 'ಪಾದರಾಯ' ಚಿತ್ರಕ್ಕೆ ಗಾಯಕಿ ಮಂಗ್ಲಿ ನಾಯಕಿ

ತಮ್ಮ ಹಾಡಿನ ಮೂಲಕವೇ ಸುದ್ದಿಯಲ್ಲಿರುವ ತೆಲುಗಿನ ಗಾಯಕಿ ಮಂಗ್ಲಿ ಇದೀಗ ಮೊದಲ ಬಾರಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
sowmya malnad
ತೆಲುಗಿನ ಗಾಯಕಿ ಮಂಗ್ಲಿ ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಹಿಟ್ ಹಾಡುಗಳನ್ನು ಹಾಡಿದ್ದಾರೆ.
ಆದರೆ, ಇದೀಗ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರ 'ಪಾದರಾಯ' ಸಿನಿಮಾಗೆ ಮಂಗ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಸದ್ಯ ವೇದ ಚಿತ್ರದ 'ಗಿಲ್ಲಕ್ಕೋ' ಹಾಡಿಗೆ ದನಿಯಾಗಿರುವ ಮಂಗ್ಲಿ, ವಿಕ್ರಾಂತ್ ರೋಣ, ತ್ರಿಬಲ್ ರೈಡಿಂಗ್, ದಿಲ್ ಪಸಂದ್, ರಾಬರ್ಟ್ ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾರೆ.
ಗಾಯಕಿ ಮಂಗ್ಲಿ ಹಾಡಿದ ಎಲ್ಲಾ ಕನ್ನಡ ಹಾಡುಗಳು ಸೂಪರ್ ಹಿಟ್ ಆಗಿವೆ.
ಇದೀಗ ಮೊದಲ ಬಾರಿಗೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ನಾಗಶೇಖರ್ ಚಿತ್ರದ ನಾಯಕ.
More