Tap to Read ➤

ಬಿಗ್ ಬಾಸ್ ಮನೆಯಿಂದ ಪ್ರಶಾಂತ್ ಸಂಬರಗಿ ಔಟ್

ಪ್ರವೀಣರಾಗಿ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಕೊಟ್ಟಿದ್ದ ಪ್ರಶಾಂತ್ ಸಂಬರಗಿ 11ನೇ ವಾರ ಮನೆಯಿಂದ ಹೊರಬಂದಿದ್ದಾರೆ.
sowmya malnad
ಫೋಟೋ ಕೃಪೆ: ಕಲರ್ಸ್ ಕನ್ನಡ
ಈ ವಾರ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿದ್ದ ಪ್ರಶಾಂತ್ ಎರಡನೇ ಬಾರಿ ದೊಡ್ಮನೆಗೆ ಪ್ರವೇಶಿಸಿದ್ದರು.
ಆದರೆ, 11ನೇ ವಾರ ಮನೆಯಿಂದ ಹೊರಬಂದಿದ್ದಾರೆ.
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರಗಿ ಮತ್ತು ರೂಪೇಶ್ ರಾಜಣ್ಣ ಅವರೇ ಹೆಚ್ಚು ಸದ್ದು ಮಾಡಿದ್ದರು.
ಪ್ರಶಾಂತ್ ಈ ಕನ್ನಡ ಹೋರಾಟಗಾರರು ರೋಲ್ ಕಾಲ್ ಗಿರಾಕಿಗಳು. ಬರೀ ದುಡ್ಡು ಮಾಡ್ತಾರೆ ಎಂದು ಹೇಳಿದ್ದರು.
ಅದಕ್ಕೆ ರೂಪೇಶ್ ರಾಜಣ್ಣ, ನಾನು ರೋಲ್ ಮಾಡಿದ್ದನ್ನು ಸಾಬೀತು ಮಾಡಿದ್ರೆ, ನಾನು ಸೂಸೈಡ್ ಮಾಡಿಕೊಳ್ಳಲು ರೆಡಿ ಎಂದಿದ್ದರು.
ಈ ವಿಚಾರಕ್ಕೆ ಗಲಾಟೆ ನಡೆದಿತ್ತು. ಜೊತೆಗೆ ಕನ್ನಡಪರ ಹೋರಾಟಗಾರರು ಪ್ರಶಾಂತ್ ವಿರುದ್ದ ಪ್ರತಿಭಟನೆ ಮಾಡಿದ್ದರು. ಬಳಿಕ ಪ್ರಶಾಂತ್ ಸಂಬರಗಿ ಕ್ಷೇಮೆ ಕೇಳಿದ್ದರು.
More