Tap to Read ➤

ಇಂದು ಅಪ್ಪು-ಅಶ್ವಿನಿ 23ನೇ ವಿವಾಹ ವಾರ್ಷಿಕೋತ್ಸವ: ಇಲ್ಲಿವೆ ಸುಂದರ ಫೋಟೋಗಳು

ಇಂದು ಪುನೀತ್​ ರಾಜ್​ಕುಮಾರ್ ಹಾಗೂ ಅಶ್ವಿನಿ ಅವರ ವಿವಾಹ ವಾರ್ಷಿಕೋತ್ಸವ. ಈ ವಿಶೇಷ ದಿನವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ನೆನಪು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಅಪ್ಪು ನಮ್ಮೊಂದಿಗೆ ಇರಬೇಕಿತ್ತು ಎಂದು ಕಣ್ಣೀರಿಡುತ್ತಿದ್ದಾರೆ.
sowmya malnad
ಇಂದು ಕನ್ನಡದ ರಾಜರತ್ನ ಪುನೀತ್​ ರಾಜ್​ಕುಮಾರ್ ಹಾಗೂ ಅಶ್ವಿನಿ ಅವರ ವಿವಾಹ ವಾರ್ಷಿಕೋತ್ಸವ.
23 ವರ್ಷಗಳ ಹಿಂದೆ 1999ರ ಡಿಸೆಂಬರ್​ 1ರಂದು ಪುನೀತ್​ ತಾವು ಪ್ರೀತಿಸಿದ ಹುಡುಗಿಯನ್ನು ವರಿಸಿದ್ದರು.
ಗುರು-ಹಿರಿಯರ ಸಮ್ಮುಖದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಪುನೀತ್​ ರಾಜ್​ಕುಮಾರ್ ಪಕ್ಕ ಫ್ಯಾಮಿಲಿ ಮ್ಯಾನ್ ಆಗಿದ್ದರು.
ಕೆಲಸದಲ್ಲಿ ಎಷ್ಟೇ ಬ್ಯುಸಿಯಿದ್ದರೂ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು.
ಈ ದಂಪತಿಗೆ ಧೃತಿ ಹಾಗೂ ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಆದರೆ, 2021ರ ಅಕ್ಟೋಬರ್ 29ರಂದು ಪುನೀತ್ ಅವರ ಹಠಾತ್ ನಿಧನರಾಗಿದ್ದು, ಇದು ಕರುನಾಡಿಗೆ ತುಂಬಲಾರದ ನಷ್ಟ.
More