Tap to Read ➤

ಕನ್ನಡ ರಾಜ್ಯೋತ್ಸವದಂದು ಅಪ್ಪುಗೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ

ನಟನೆಯಿಂದ ಮಾತ್ರವಲ್ಲದೇ ಸರಳ ಬದುಕು, ಸಾಮಾಜಿಕ ಕಾರ್ಯ ಮತ್ತು ಸಾಧನೆಯಿಂದ ಚಿರಸ್ಥಾಯಿಯಾಗಿರುವ ದಿವಂಗತ ಡಾ.ಪುನೀತ್‌ ರಾಜ್‌ಕುಮಾರ್‌ ಅವರಿ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡಲಾಗಿದೆ.
sowmya malnad
67ನೇ ಕನ್ನಡ ರಾಜ್ಯೋತ್ಸವದಂದು ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಲಾಗಿದೆ.
ಸಿನಿಮಾ ಹಾಗೂ ಸಮಾಜಸೇವೆಯಲ್ಲಿ ಸಾಧನೆ ಮಾಡಿದ್ದ ಪುನೀತ್‌ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ವಿಶೇಷ ಸಂದರ್ಭದಲ್ಲಿ ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್, ಯಂಗ್ ಟೈಗರ್ ಜೂ.ಎನ್‌ಟಿಆರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಇಬ್ಬರು ಗಣ್ಯರ ಸಮ್ಮುಖದಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಲಾಗಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಪತಿಯನ್ನು ಕಳೆದುಕೊಂಡ ನೋವಿನಲ್ಲೂ ಕರ್ನಾಟಕ ಸರ್ಕಾರ ನೀಡಿದ ಈ ಗೌರವವನ್ನು ಗಣ್ಯರ ಸಮ್ಮುಖದಲ್ಲಿ ಸ್ವೀಕರಿಸಿದ್ದಾರೆ.
ನಂತರ ಅಶ್ವಿನಿ ಹಾಗೂ ಪುತ್ರಿ ವಂದಿತಾ ಇಬ್ಬರೂ ಜೊತೆಯಾಗಿ ಅಪ್ಪು ಭಾವಚಿತ್ರದ ಮುಂದೆ ನಿಂತು ಪ್ರಶಸ್ತಿಯನ್ನು ಅರ್ಪಿಸಿದ್ದಾರೆ.
More