Tap to Read ➤

ಪುನೀತ್ ಕನಸಿನ ಕೂಸು 'ಗಂಧದ ಗುಡಿ' 3ನೇ ದಿನ ಗಳಿಸಿದ್ದೆಷ್ಟು ಗೊತ್ತಾ?

ಪುನೀತ್ ರಾಜ್‌ಕುಮಾರ್ ಕನಸಿನ ಕೂಸು 'ಗಂಧದ ಗುಡಿ' ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಇಲ್ಲಿಯವರೆಗೂ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಇಲ್ಲಿದೆ.
sowmya malnad
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸಿನ ಕೂಸು 'ಗಂಧದ ಗುಡಿ' ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ಮೊದಲ ದಿನವೇ ಐದು ಕೋಟಿ ಗಳಿಸಿ ಸದ್ದು ಮಾಡಿದ್ದ ಗಂಧದ ಗುಡಿ ಚಿತ್ರ ಎರಡನೇ ದಿನ 4.5 ಕೋಟಿ ಗಳಿಸಿತ್ತು.
ಮೊದಲೆರಡು ದಿನಗಳಲ್ಲಿ ಒಟ್ಟಾರೆ 9.5 ಕೋಟಿ ಗಳಿಸಿದ್ದ ಗಂಧದ ಗುಡಿ ಚಿತ್ರ ಮೂರನೇ ದಿನ 5 ಕೋಟಿ ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ತಿಳಿಸಿದ್ದಾರೆ.
ಈ ಪ್ರಕಾರ ಗಂಧದ ಗುಡಿ ಮೂರು ದಿನಗಳಲ್ಲಿ ಒಟ್ಟಾರೆ 14.5 ಕೋಟಿ ಗಳಿಕೆ ಮಾಡಿದಂತಾಗಿದೆ.
ಗಂಧದ ಗುಡಿ ಸಿನಿಮಾವನ್ನು ಸುಮಾರು ಏಳು ಕೋಟಿ ವೆಚ್ಚದಲ್ಲಿ ತಯಾರು ಮಾಡಲಾಗಿದೆ ಎನ್ನಲಾಗಿದೆ.
ಅಪ್ಪು ಅಭಿನಯದ ಕೊನೆಯ ಚಿತ್ರ ಎಂಬ ಕಾರಣವಲ್ಲದೇ 'ಗಂಧದ ಗುಡಿ' ಚಿತ್ರ ಕಂಟೆಂಟ್ ವಿಚಾರವಾಗಿ ಸದ್ದು ಮಾಡುತ್ತಿದೆ.
Created by potrace 1.15, written by Peter Selinger 2001-2017
More