Tap to Read ➤

ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿದ್ದಾರೆ ಸ್ಯಾಂಡಲ್‌ವುಡ್‌ ಸಿಂಡ್ರೆಲಾ

ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಪಂಡಿತ್ ಅತ್ಯುತ್ತಮ ಕಥೆಯೊಂದಿಗೆ ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ತಯಾರಿ ನಡೆಸುತ್ತಿದ್ದು, ಇದರ ಮಾಹಿತಿ ಇಲ್ಲಿದೆ.
sowmya malnad
ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ರಾಧಿಕಾ ಪಂಡಿತ್ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ರಾಧಿಕಾ ಕೊನೆಯದಾಗಿ ಆದಿಲಕ್ಷ್ಮಿ ಪುರಾಣ ಸಿನಿಮಾದಲ್ಲಿ ನಟಿಸಿದ್ದರು.
ಇದಾದ ಬಳಿಕ ಮನೆ, ಮಕ್ಕಳು, ಸಂಸಾರ ಅಂತ ಬ್ಯುಸಿಯಾಗಿದ್ದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದರು.
ಆಗಾಗ ಮಕ್ಕಳ ಜೊತೆ ಹೊಸ-ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಜೊತೆಗೆ ಹಬ್ಬಗಳಿಗೆ ಶುಭಾಶಯ ಕೋರುತ್ತಿದ್ದರು.
ಎರಡು ಮಕ್ಕಳ ತಾಯಿಯಾಗಿರುವ ರಾಧಿಕಾ ಪಂಡಿತ್, ಫಿಟ್ ನೆಸ್ ಕಾಪಾಡಿಕೊಂಡಿದ್ದಾರೆ.
ಸದ್ಯ ಹಲವು ಕಥೆಗಳನ್ನು ಕೇಳುತ್ತಿರುವ ರಾಧಿಕಾ, ಸ್ತ್ರೀ ಪ್ರಧಾನ ಪಾತ್ರಗಳ ಮೂಲಕ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ರಾಧಿಕಾ ಪಂಡಿತ್ ಅವರನ್ನು ತೆರೆಮೇಲೆ ನೋಡಲು ಅವರ ಅಪಾರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
More