Tap to Read ➤

ಸತತ ಟ್ರೋಲ್ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿ ಜೀವನದ ಆರಂಭದಿಂದಲೂ ಆಗುತ್ತಿರುವ ಟ್ರೋಲ್ ಬಗ್ಗೆ ನೋವು ತೋಡಿಕೊಂಡಿದ್ದಾರೆ.
sowmya malnad
ತಮ್ಮ ವೃತ್ತಿ ಜೀವನದ ಆರಂಭದಿಂದಲೂ ರಶ್ಮಿಕಾ ಮಂದಣ್ಣ ಟ್ರೋಲ್‌ಗೆ ಗುರಿಯಾಗುತ್ತಲೇ ಬಂದಿದ್ದಾರೆ.
ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕ್‌ಅಪ್, ತಮಗೆ ಕನ್ನಡ ಭಾಷೆ ಮಾತನಾಡಲು ಬರಲ್ಲ ಎಂದಿದ್ದು ಇನ್ನೂ ಹಲವು ಕಾರಣಗಳಿಗೆ ರಶ್ಮಿಕಾ ಸತತವಾಗಿ ಟ್ರೋಲ್‌ಗೆ ಒಳಗಾಗಿದ್ದಾರೆ.
ಇದೀಗ ಸತತ ಟ್ರೋಲ್ ಬಗ್ಗೆ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬಹಳ ಉದ್ದದ ಪತ್ರವೊಂದನ್ನು ಬರೆದಿದ್ದಾರೆ.
ಕೆಲವು ದಿನ, ವಾರ, ತಿಂಗಳು ವರ್ಷಗಳಿಂದಲೂ ಕೆಲವು ವಿಷಯಗಳು ನನಗೆ ಸಮಸ್ಯೆ ನೀಡುತ್ತಿವೆ.
ಕೆಲವು ಟ್ರೋಲರ್‌ಗಳಿಗಂತೂ ನಾನು ಒಂದು ರೀತಿ ಪಂಚಿಂಗ್ ಬ್ಯಾಗ್ ಆಗಿದ್ದೇನೆ. ಸಾಕಷ್ಟು ಋಣಾತ್ಮಕತೆಯನ್ನು ಪಡೆಯುತ್ತಲೇ ಬಂದಿದ್ದೇನೆ.
ನನ್ನನ್ನು ಅಪಹಾಸ್ಯ ಮಾಡಿದಾಗ ಅದೂ ನಾನು ಹೇಳದ ವಿಷಯಕ್ಕಾಗಿ ನನ್ನನ್ನು ಕೆಟ್ಟದಾಗಿ ಮೂದಲಿಸಿದಾಗ ಹೃದಯ ಒಡೆದಂತೆ ಭಾಸವಾಗುತ್ತದೆ ಎಂದಿದ್ದಾರೆ.
ಹೀಗೆ ಹಲವಾರು ವಿಷಯಗಳ ಬಗ್ಗೆ ರಶ್ಮಿಕಾ ನೋವು ತೋಡಿಕೊಂಡಿದ್ದಾರೆ.
More