Tap to Read ➤

'ಕಾಂತಾರ' ಹಿಂದಿಯಲ್ಲಿ ಗಳಿಸಿದ್ದೆಷ್ಟು ಗೊತ್ತಾ?

ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಅಬ್ಬರಿಸುತ್ತಿದ್ದು, ಹಿಂದಿ ಸಿನಿಮಾಗಳೂ ಗಳಿಸದಷ್ಟು ಗಳಿಕೆ ಮಾಡುತ್ತಿದೆ. ಈವರೆಗೆ ಕಾಂತಾರ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಇಲ್ಲಿದೆ.
sowmya malnad
ಕನ್ನಡದ 'ಕಾಂತಾರ' ಸಿನಿಮಾ ದೇಶಾದ್ಯಂತ ಅಬ್ಬರಿಸುತ್ತಿದೆ.
ಸಿನಿಮಾ ಬಿಡುಗಡೆಯಾಗಿ 41 ದಿನಗಳು ಕಳೆದಿದ್ದರೂ 'ಕಾಂತಾರ' ಸಿನಿಮಾದ ಹವಾ ಕಡಿಮೆಯಾಗಿಲ್ಲ.
ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಅಬ್ಬರಿಸುತ್ತಿದೆ. ಬಾಲಿವುಡ್ ಸಿನಿಮಾಗಳೂ ಗಳಿಸದಷ್ಟು ಗಳಿಕೆ ಮಾಡುತ್ತಿದೆ.
ನವೆಂಬರ್ 8ರ ವರೆಗೆ 'ಕಾಂತಾರ' ಕೇವಲ ಹಿಂದಿ ಬೆಲ್ಟ್‌ನಲ್ಲಿ 67 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ನ.9 ಮತ್ತು ನ.10ರ ಕಲೆಕ್ಷನ್​ ಕೂಡ ಸೇರಿಸಿದರೆ ಒಟ್ಟು 70 ಕೋಟಿ ರೂಪಾಯಿ ಆಗಲಿದೆ.
ಆ ಮೂಲಕ 'ಕಾಂತಾರ' ಚಿತ್ರ ಹಿಂದಿಯಲ್ಲಿ ಭರ್ಜರಿಯಾಗಿಯೇ ಧೂಳೆಬ್ಬಿಸಿದಂತಾಗಿದೆ.
ತೆಲುಗು ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದು, ಎಲ್ಲ ಭಾಷೆಯ ಕಲೆಕ್ಷನ್​ ಸೇರಿ 350 ಕೋಟಿ ರೂಪಾಯಿ ಸಮೀಪಿಸುತ್ತಿದೆ.
More