Tap to Read ➤

16ನೇ ದಿನ ದಾಖಲೆ ಗಳಿಕೆ ಮಾಡಿದ 'ಕಾಂತಾರ' ಸಿನಿಮಾ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 16ನೇ ದಿನ ದಾಖಲೆಯ ಗಳಿಕೆ ಮಾಡಿದ್ದು, ಅದರ ಮಾಹಿತಿ ಇಲ್ಲಿದೆ.
sowmya malnad
'ಕಾಂತಾರ' ದಾಖಲೆಗಳ ಸರಮಾಲೆ ಮುಂದುವರೆದಿದೆ. ಹಿಂದಿ, ತೆಲುಗು, ತಮಿಳಿಗೆ ಡಬ್ ಆಗಿ ರಿಲೀಸ್ ಆಗಿರುವ ಚಿತ್ರಕ್ಕೂ ಹೊರ ರಾಜ್ಯಗಳಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ತಿದೆ.
'ಕಾಂತಾರ' ಸಿನಿಮಾ ಶನಿವಾರ (ಅಕ್ಟೋಬರ್ 15) ಹೊಸ ದಾಖಲೆ ಸೃಷ್ಟಿ ಮಾಡಿದೆ.
ಬಿಡುಗಡೆಯಾದ 16ನೇ ದಿನಕ್ಕೆ 15 ಕೋಟಿ ರೂ. ಸಂಗ್ರಹಿಸುವ ಮೂಲಕ ಅತೀ ಹೆಚ್ಚು ಗಳಿಕೆ ಮಾಡಿದೆ.
ಕಾಂತಾರ' ಚಿತ್ರದ ಕನ್ನಡ ಅವತರಣಿಕೆಯು ಸೆಪ್ಟೆಂಬರ್ 30ರಂದು ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಬಿಡುಗಡೆಯಾಯಿತು.
ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪರಭಾಷಿಕರ ಬೇಡಿಕೆ ಮೇರೆಗೆ ಚಿತ್ರವನ್ನು ಅಕ್ಟೋಬರ್ 14ರಂದು ಹಿಂದಿ,15ರಂದು ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆ ಮಾಡಲಾಗಿತ್ತು.
ಹಾಗಾಗಿ ಸಿನಿಮಾ ಕಲೆಕ್ಷನ್ 15ನೇ ದಿನ ದಿಢೀರ್ ಹೆಚ್ಚಳ ಕಂಡಿದೆ. ಶನಿವಾರ ಒಂದೇ ದಿನ 'ಕಾಂತಾರ' ಚಿತ್ರವು ನಾಲ್ಕು ಭಾಷೆಗಳಿಂದ ಸೇರಿ 15 ಕೋಟಿ ರೂ. ಗಳಿಕೆ ಕಂಡಿದೆ.
'ಕಾಂತಾರ' ಚಿತ್ರದ ಕನ್ನಡ ಅವತರಿಣಿಕೆಯು ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದು, ಶನಿವಾರಕ್ಕೆ 16 ದಿನಗಳಾಗಿವೆ.
16ನೇ ದಿನ ನಾಲ್ಕು ಭಾಷೆಗಳಿಂದ 15 ಕೋಟಿ ರೂ. ಗಳಿಕೆ ಮಾಡಿ ಹೊಸ ದಾಖಲೆ ಮಾಡಿದ್ದು, ಈ ಬಗ್ಗೆ ಹೊಂಬಾಳೆ ಸಂಸ್ಥೆಯಿಂದಲೇ ಅಧಿಕೃತ ಮಾಹಿತಿ ಸಿಕ್ಕಿದೆ.