Tap to Read ➤

'ಕಾಂತಾರ' ಯಶಸ್ಸಿನ ಖುಷಿಯಲ್ಲಿ ಮಗಳ ಫೋಟೋ ಹಂಚಿಕೊಂಡ ರಿಷಬ್‌ ಶೆಟ್ಟಿ

ಕರಾವಳಿ ಸಂಸ್ಕೃತಿಯನ್ನು ಹೊತ್ತು ತಂದ ಕಾಂತಾರ ಚಿತ್ರ ಎಲ್ಲರ ನಿರೀಕ್ಷೆ ಮೀರಿ ಸೂಪರ್ ಹಿಟ್‌ ಆಗಿದೆ. ಇದೇ ಖುಷಿಯಲ್ಲಿ ರಿಷಬ್ ಶೆಟ್ಟಿ ಮಗಳ ಫೋಟೋ ಹಂಚಿಕೊಂಡಿದ್ದಾರೆ.
sowmya malnad
ರಿಷಬ್‌ ಶೆಟ್ಟಿ ತಾವೇ, ರಚಿಸಿ, ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದೆ. ಎಲ್ಲರ ಬಾಯಲ್ಲೂ ಕಾಂತಾರ ಚಿತ್ರದ ಹೆಸರು ಕೇಳಿ ಬರುತ್ತಿದೆ.
ಸದ್ಯ 'ಕಾಂತಾರ' ಯಶಸ್ಸಿನ ಖುಷಿಯಲ್ಲಿರುವ ರಿಷಬ್‌ ಶೆಟ್ಟಿ ತಮ್ಮ ಅಭಿಮಾನಿಗಳೊಂದಿಗೆ ಮತ್ತೊಂದು ಸಂತೋಷವನ್ನು ಹಂಚಿಕೊಂಡಿದ್ದಾರೆ.
ರಿಷಬ್ ಹಾಗೂ ಪ್ರಗತಿ ದಂಪತಿಗೆ ರಣ್ವಿತ್ ಶೆಟ್ಟಿ ಎಂಬ ಮಗ ಹಾಗೂ ರಾಧ್ಯಾ ಎಂಬ ಮಗಳಿದ್ದಾರೆ.
ಇದೀಗ ರಿಷಬ್‌ ಶೆಟ್ಟಿ ತಮ್ಮ ಮಗಳ ಮುದ್ದಾದ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಜೊತೆಗೆ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.
ನಾಡಹಬ್ಬಕ್ಕೆ ಕಾಂತಾರದ ಯಶಸ್ಸು, ನಾಡಿನ ಜನರ ಪ್ರೀತಿ ಮತ್ತಷ್ಟು ಸಂಭ್ರಮವನ್ನು ತಂದಿವೆ. ಇದಕ್ಕೆ ಕಲಶಪ್ರಾಯವಾಗಿ, ಮಗಳು ರಾಧ್ಯಾಳ ಮುಗ್ಧ ನಗುವೂ ಜೊತೆಯಾಗಿದೆ. ನಿಮ್ಮೆಲ್ಲರ ಹಾರೈಕೆಗಳಿರಲಿ ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ನಟ ರಿಷಬ್‌ ಶೆಟ್ಟಿ ತಮ್ಮ ಮಗಳು ರಾಧ್ಯಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ರಿಷಬ್ ಶೆಟ್ಟಿ ಅವರ ಮಗ ರಣ್ವಿತ್ ಶೆಟ್ಟಿ
More