Tap to Read ➤

ಯಶಸ್ವಿ 50 ದಿನ ಪೂರೈಸಿದ 'ಕಾಂತಾರ' ಸಿನಿಮಾ

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಮತ್ಯಾವುದೇ ಸಿನಿಮಾ ಮಾಡದ ದಾಖಲೆಗಳನ್ನು ಮಾಡಿ 'ಕಾಂತಾರ' ಸಿನಿಮಾ 50 ದಿನ ಪೂರೈಸಿದೆ. ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ ಸಿನಿಮಾ ಸದ್ಯ 50 ದಿನ ಪೂರೈಸಿದೆ.
sowmya malnad
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಯಶಸ್ವಿ 50 ದಿನಗಳನ್ನು ಪೂರೈಸಿದೆ.
ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ ಸಿನಿಮಾ, ಸದ್ಯ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಕಾಂತಾರ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಪಂಜುರ್ಲಿ, ಗುಳಿಗ ದೈವದ ಆಶೀರ್ವಾದ ಎಂದಿಗೂ ಎಲ್ಲರ ಮೇಲಿರಲಿ. ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ನಾವು ಆಭಾರಿ. ಧನ್ಯವಾದಗಳು ಎಂದು ಟ್ವೀಟ್ ಮಾಡಿದೆ.
ಹೊಂಬಾಳೆ ನಿರ್ಮಿಸಿದ ಸಿನಿಮಾಗಳಲ್ಲೇ ಅತಿಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಕಾಂತಾರ. ಕರ್ನಾಟಕವೊಂದರಲ್ಲೇ 1 ಕೋಟಿ ಟಿಕೆಟ್ ಮಾರಾಟವಾಗಿತ್ತು.
ರಾಜ್ಯದಲ್ಲಿ 300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ 50 ದಿನ ಪೂರೈಸಿ ದಾಖಲೆ ಬರೆದಿದೆ.
ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲೂ ಕಾಂತಾರ ಸಿನಿಮಾ 50 ದಿನ ಪೂರೈಸುವ ನಿರೀಕ್ಷೆಯಿದ್ದು, ಈಗಲೂ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ.
More