Tap to Read ➤

'ಐರಾ ಪ್ರೊಡಕ್ಷನ್ ಹೌಸ್' ಅಡಿಯಲ್ಲಿ ಯಶ್ ಮುಂದಿನ ಚಿತ್ರ!

ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿದೆ. ಕನ್ನಡಿಗರು ಮಾತ್ರವಲ್ಲದೆ, ದೇಶವೇ ಯಶ್ ಅವರ ಮುಂದಿನ ಸಿನಿಮಾ ನಿರೀಕ್ಷೆಯಲ್ಲಿದೆ. ಈ ನಡುವೆ 'ಐರಾ ಪ್ರೊಡಕ್ಷನ್ ಹೌಸ್' ಎಂಬ ಹೆಸರಿನಡಿಯಲ್ಲಿ ಯಶ್ ಮುಂದಿನ ಸಿನಿಮಾ ಎಂಬ ಸುದ್ದಿಯಿದೆ.
sowmya malnad
ಯಶ್ ತಾವು ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸುತ್ತಿರುವ ಕುರಿತಾಗಿ ಎಲ್ಲಿಯೂ ಸಹ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಆದರೆ, ಕಳೆದ ಹಲವಾರು ದಿನಗಳಿಂದ ಯಶ್ ಬ್ಯಾನರ್ ಆರಂಭಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
'ಐರಾ ಪ್ರೊಡಕ್ಷನ್ ಹೌಸ್' ಎಂಬ ಹೆಸರಿನಡಿಯಲ್ಲಿ ಯಶ್ ಚಿತ್ರ ನಿರ್ಮಾಣಕ್ಕೆ ಇಳಿಯಲಿದ್ದಾರೆ.
ಇದೇ ಬ್ಯಾನರ್ ಅಡಿಯಲ್ಲಿ ಯಶ್ ಮುಂದಿನ ಚಿತ್ರ 'ಯಶ್ 19' ಮೂಡಿಬರಲಿದೆ ಎಂಬ ಸುದ್ದಿ ಸದ್ಯ ಹರಿದಾಡುತ್ತಿವೆ.
ಐರಾ ಎಂಬುದು ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮುದ್ದಿನ ಪುತ್ರಿಯ ಹೆಸರು.
ಐರಾ ಹೆಸರಿನಲ್ಲಿಯೇ ಯಶ್ ಪ್ರೊಡಕ್ಷನ್ ಹೌಸ್ ನಿರ್ಮಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
'ಐರಾ ಪ್ರೊಡಕ್ಷನ್ ಹೌಸ್' ನಿಜವಾಗಿಯೂ ಆರಂಭಗೊಂಡರೆ ರಾಧಿಕಾ ಪಂಡಿತ್ ನಿರ್ಮಾಪಕಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
More